35-40 ವರ್ಷವಾದರೂ ಮದುವೆಗೆ ಹೆಣ್ಣು ಸಿಗದೇ ಪರದಾಡುವರು ನಮ್ಮನಡುವೆ ಸಾಕಷ್ಟು ಮಂದಿ ಸಿಗಬಹುದು. ಇಲ್ಲೊಬ್ಬ ಮಹಾಶಯ 39 ವರ್ಷಕ್ಕೆ ಅಜ್ಜನ ಪಟ್ಟ ಅಲಂಕರಿಸಿದ್ದಾನೆ.
ಕಾರ್ಲ್ ಪಾವೊಲಿ ಎಂಬಾತ ತನ್ನ 39ನೇ ವಯಸ್ಸಿನಲ್ಲಿ ಅಜ್ಜನಾಗಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ನೆಟ್ಟಿಗರು ಹೌಹಾರಿದ್ದಾರೆ.
ಕಾರ್ಲ್ ಪಾವೊಲಿ ಮಗುವನ್ನು ಹಿಡಿದಿದ್ದ ಟಿಕ್ ಟಾಕ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಹಾಗೆಯೇ ‘ಗ್ರಾಂಡ್ ಪ ಲೈಫ್ ಅತ್ಯುತ್ತಮವಾದದ್ದು’ ಎಂದು ಒಂದು ಸಾಲು ಬರೆದುಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ.
ಬಿಗ್ ನ್ಯೂಸ್: ಉಚಿತವಾಗಿ ಲಸಿಕೆ ನೀಡಲು ರಾಜಸ್ಥಾನ, ಪಂಜಾಬ್ ನಿರ್ಧಾರ -ರಾಜ್ಯದಲ್ಲೂ ಇಂದು ತೀರ್ಮಾನ
ಕೊನೆಗೆ ತನ್ನಕತೆ ದಾಖಲಿಸಿದ ಕಾರ್ಲ್, ತಾನು 39ನೇ ವಯಸ್ಸಿನಲ್ಲಿ ಅಜ್ಜನಾಗಲು ಕಾರಣವನ್ನು ಬಹಿರಂಗಪಡಿಸಿದ್ದಾರೆ.
ನಾನು- ನನ್ನ ಹೆಂಡತಿ ದತ್ತು ತೆಗೆದುಕೊಂಡಾಕೆಗೆ ಈಗ 23 ವರ್ಷ, ಆಕೆಯೀಗ ಪುಟ್ಟ ಮಗುವಿನ ತಾಯಿಯಾಗಿದ್ದಾಳೆ. ಹೀಗೆ ನಾವು ಅಜ್ಜ – ಅಜ್ಜಿ ಆಗಿದ್ದೇವೆ ಎಂದು ವಿವರಿಸಿದ್ದಾರೆ. ಇವರ ಕತೆ ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://www.instagram.com/p/CN3S7bFjUID/?utm_source=ig_web_copy_link