ಕೊರೊನಾ ಕಾಟದ ಕಾರಣ ಮಾಸ್ಕ್ ಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಡಿಮ್ಯಾಂಡ್ ನಲ್ಲಿರುವ ಆರೋಗ್ಯ ರಕ್ಷಾ ಕವಚವೆಂದರೆ ಅದು ಮುಖದ ಶೀಲ್ಡ್ ಅಥವಾ ವೈಸರ್ಗಳು.
ಲಕ್ಸೂರಿ ಬ್ರಾಂಡ್ ಲೂಯಿ ವಿಟ್ಟಾಂ ಈ ವೈಸರ್ಗೊಂದು ಅದ್ಧೂರಿ ಟಚ್ ಕೊಟ್ಟಿದೆ. $960 ಬೆಲೆಬಾಳುವ ಈ ಶೀಲ್ಡ್ನಲ್ಲಿ ಚಿನ್ನದ ಸ್ಟಡ್ ಗಳನ್ನು ಅಳಡಿಸಿದ್ದು, ಸೂರ್ಯ ರಶ್ಮಿಯ ತೀವ್ರತೆಗೆ ಅನುಗುಣವಾಗಿ ಈ ವೈಸರ್ ತನ್ನ ಬಣ್ಣವನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ಕಣ್ಣುಗಳನ್ನು ರಕ್ಷಿಸಲಿದೆ.
ಇದೇ ಮಾರ್ಚ್ ತಿಂಗಳಲ್ಲಿ ಫ್ರಾನ್ಸ್ನಾದ್ಯಂತ ಆಸ್ಪತ್ರೆಗಳಿಗೆ ಹಾಗೂ ಕ್ಲಿನಿಕ್ಗಳಿಗೆ ಒದಗಿಸಲೆಂದು ಲೂಯಿ ವಿಟ್ಟಾಂ ಖುದ್ದು ತಾನೇ ಸ್ಯಾನಿಟೈಸರ್ ಗಳ ಉತ್ಪಾದನೆಗೆ ನಿಂತಿತ್ತು.