ವ್ಯಾಲೆಂಟೈನ್ಸ್ ಡೇ ಅಂದ್ರೆ ಅದು ಪ್ರೀತಿಯನ್ನ ಸಂಭ್ರಮಿಸುವ ದಿನ. ಆದರೆ ಎಲ್ಲಾ ದಂಪತಿ ತಮ್ಮ ವೈವಾಹಿಕ ಜೀವನದಿಂದ ಖುಷಿಯಾಗಿ ಇರ್ತಾರೆ ಎಂದು ಹೇಳೋಕೆ ಆಗಲ್ಲ. ಇದಕ್ಕಾಗಿಯೇ ಈ ವಿಶೇಷ ನ್ಯಾಯಾಲಯದಲ್ಲಿ ವ್ಯಾಲೆಂಟೈನ್ಸ್ ಡೇ ದಿನದಂದು ಓರ್ವ ಅದೃಷ್ಟಶಾಲಿ ದಂಪತಿಗೆ ಉಚಿತವಾಗಿ ವಿಚ್ಚೇದನವನ್ನ ನೀಡಲಾಗುತ್ತಿದೆ.
ಅಮೆರಿಕದ ಟೆನ್ನೆಸ್ಸಿ ರಾಜ್ಯದ ಕ್ರಾಸ್ವಿಲ್ಲೆಯಲ್ಲಿರುವ ನ್ಯಾಯಾಲಯದಲ್ಲಿ ಕಾನೂನು ಘಟಕವೊಂದು ಉಚಿತ ಕಾನೂನು ಸೇವೆಯ ಮೂಲಕ ವಿಚ್ಚೇದನವನ್ನ ನೀಡಲು ಓರ್ವ ವ್ಯಕ್ತಿಯನ್ನ ಆಯ್ಕೆ ಮಾಡಲಾಗುತ್ತಿದೆ.
ಕೋರ್ಟ್ ಆವರಣದಲ್ಲೇ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ಕೊರೊನಾ ಸಂಕಷ್ಟದಿಂದಾಗಿ ಅನೇಕರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಅದರಲ್ಲೂ ಭಿನ್ನಾಭಿಪ್ರಾಯ ಹೊಂದಿರುವ ಅನೇಕ ದಂಪತಿ ವಿಚ್ಚೇದನ ಪಡೆಯಲು ಹಣ ಹೊಂದಿಸಲು ಸಾಧ್ಯವಾಗದೇ ಕೋರ್ಟ್ ಕಡೆ ಮುಖ ಮಾಡುತ್ತಿಲ್ಲ. ಟೆನ್ನೆಸ್ಸಿಯಲ್ಲಿ ವಿಚ್ಚೇದನ ಅರ್ಜಿ ವಿಚಾರಣೆಗೆ ಕಡಿಮೆ ಅಂದ್ರುನೂ 83847.07 ರೂಪಾಯಿ ಶುಲ್ಕ ಪಾವತಿ ಮಾಡಬೇಕು.
ಹೀಗಾಗಿ ವಿಚ್ಚೇದನ ಪಡೆಯಲು ಆಸಕ್ತಿ ಹೊಂದಿರುವ ವ್ಯಕ್ತಿ ತಮ್ಮ ವೈವಾಹಿಕ ಜೀವನದ ಕಲಹದ ಬಗ್ಗೆ ಇ ಮೇಲ್ ಮಾಡುವಂತೆ ಹೇಳಿದೆ. ದಂಪತಿಗಳಿಬ್ಬರೂ ಒಪ್ಪಿ ವಿಚ್ಚೇದನ ಪಡೆಯುವ ಜೋಡಿಗಳಲ್ಲಿ ಒಬ್ಬ ಅದೃಷ್ಟವಂತ ಜೋಡಿ ಉಚಿತ ಕಾನೂನು ಸೇವೆ ಪಡೆಯಲಿದೆ. ಮಕ್ಕಳ ಕಸ್ಟಡಿ ವಿಚಾರವಾಗಿ ಗೊಂದಲ ಹೊಂದಿರುವ ದಂಪತಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗೋದು ಬೇಡ ಎಂದು ಸೂಚಿಸಲಾಗಿದೆ. ಫೆಬ್ರವರಿ 19ನೇ ತಾರೀಖಿನಂದು ವಿಜೇತ ಜೋಡಿಯ ಹೆಸರು ಘೋಷಣೆಯಾಗಲಿದೆ.