ಕೊರೋನಾ ವೈರಸ್‌ನ ಬಾಧೆ ಎಲ್ಲೆಡೆ ವ್ಯಾಪಕವಾಗಿ ಹಬ್ಬಿದ್ದು, ಜನರೆಲ್ಲಾ ತಮ್ಮನ್ನು ಇದರಿಂದ ರಕ್ಷಿಸಿಕೊಳ್ಳಲು ನಾನಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಮುಖಕ್ಕೆ ಮಾಸ್ಕ್ ಧರಿಸುವುದು ನಮ್ಮ ಮುಂದೆ ಸದ್ಯಕ್ಕೆಇರುವ ಎರಡೇ ಆಯ್ಕೆಗಳು.
ಮಾಸ್ಕ್ ಧರಿಸುವುದು ಸಾಕಷ್ಟು ಜನರಿಗೆ ಕಿರಿಕಿರಿ. ಅದರಲ್ಲೂ ಕನ್ನಡಕಧಾರಿಗಳಿಗೆ ಗಾಜಿನ ಮೇಲೆ ಮಂಜು ಆವರಿಸುವ ಕಾರಣ ದೃಷ್ಟಿಯ ಮೇಲೆ ಪ್ರಭಾವ ಉಂಟಾಗುತ್ತದೆ.
ಈ ಸಮಸ್ಯೆಯನ್ನು ಶಪಿಸುವ ಬದಲು ಅದನ್ನೇ ಪ್ರೀತಿಸಲು ಜಪಾನ್‌ನ ಟಾಕಾಹೀರೋ ಶಿಬಾತಾ ಎಂಬಾತ ಫನ್ನಿ ಐಡಿಯಾವೊಂದನ್ನು ಕಂಡುಕೊಂಡಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗದೇ ಇದ್ದಾಗ ಆತ ಹೀಗೆ ಮಾಡಿದ್ದಾರೆ.
ಜೇಡಿಮಣ್ಣು ಬಳಸಿಕೊಂಡು 3D ರಾಮೆನ್ ಮಾಸ್ಕ್ ಸಿದ್ಧಪಡಿಸಿರುವ ಶಿಬಾತಾ, ಈ ಮಾಸ್ಕ್ ಹಾಕಿಕೊಂಡಾಗ ಕನ್ನಡಕದ ಮೇಲೆ ಏನಾದರೂ ಮಂಜು ಸೃಷ್ಟಿಯಾದರೆ, ಬಟ್ಟಲಲ್ಲಿ ಇರುವ ಬಿಸಿ ಖಾದ್ಯದ ಹಬೆಯಿಂದ ಹಾಗೆ ಆಗಿದೆ ಎನಿಸುವಂತೆ ಮಾಡಿದ್ದಾರೆ. ರಾಮೆನ್ ಬೌಲ್‌ನಲ್ಲಿ ಪೋರ್ಕ್, ಹಸಿರು ಈರುಳ್ಳಿ, ಬಿದಿರು, ಮೀನು ಸೇರಿದಂತೆ ಸಾಕಷ್ಟು ಐಟಮ್‌ಗಳಿವೆ.