ತಾನು ವರಿಸಲಿರುವ ಮದುಮಗಳನ್ನು ಮೊದಲ ಬಾರಿಗೆ ಕಂಡ ಮದುಮಗನ ಭಾವನೆಗಳನ್ನು ಸೆರೆಹಿಡಿದ ಛಾಯಾಗ್ರಾಹಕರು ಈ ಕ್ಷಣಗಳನ್ನು ಸ್ಮರಣೀಯವಾಗಿಸಲು ಥರಹೇವಾರಿ ಟ್ರಿಕ್ಗಳನ್ನು ಬಳಸುತ್ತಾರೆ.
ಇಂಥ ಮದುಮಗನೊಬ್ಬ ತನ್ನ ಬಾಳಸಂಗಾತಿಯನ್ನು ಮದುವೆಯ ಧಿರಿಸಿನಲ್ಲಿ ಮೊದಲ ಬಾರಿಗೆ ಕಂಡಾಗ ಆತನ ಮುಖದಲ್ಲಿ ಕಂಡ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಈ ಸೀನ್ಗೊಂದು ಟ್ವಿಸ್ಟ್ ಇದ್ದು, ನೆಟ್ಟಿಗರು ಇದನ್ನು ಕಂಡು ದಂಗುಬಡಿದಿದ್ದಾರೆ.
ಅಸಲಿಗೆ ಮದುವಣಗಿತ್ತಿಯ ಅವತಾರದಲ್ಲಿ ಈ ಸೀನ್ನಲ್ಲಿ ಬಂದಿದ್ದು ಮದುವೆ ಹೆಣ್ಣೇ ಅಲ್ಲ…! ಹೌದು, ವರನ ಕಡೆಯ ಬೆಸ್ಟ್ ಮ್ಯಾನ್ (ಮದುವೆಯಲ್ಲಿ ವರನ ನೆರವಿಗೆ ನಿಲ್ಲುವ ಅತ್ಯಾಪ್ತ) ಖುದ್ದು ಮದುಮಗಳ ಧಿರಿಸಿನಲ್ಲಿ ಬಂದು, ಆತನ ಹಿಂದಿನಿಂದ ಬಂದು ತೋಳನ್ನು ತಿವಿದಿದ್ದಾರೆ. ಆಗ ಹಿಂದೆ ತಿರುಗಿ ನೋಡಿದ ವರ ಒಮ್ಮೆಲೇ ಚಕಿತಗೊಂಡು ಜೋರಾಗಿ ನಕ್ಕಿದ್ದಾರೆ. ಈ ಕ್ಷಣದ ಚಿತ್ರಗಳು ಹಾಗೂ ವಿಡಿಯೋಗಳು ವೈರಲ್ ಆಗಿವೆ.
https://www.instagram.com/p/CO-r43ZAKLV/?utm_source=ig_web_copy_link