ಕೊರೊನಾ ನಡುವೆಯೇ ವಿವಿಧ ದೇಶಗಳಲ್ಲಿ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿವಿಧ ತಂತ್ರ ರೂಪಿಸಿಕೊಳ್ಳುತ್ತಿವೆ.
ಜರ್ಮನ್ ಶಾಲೆಯು ಸರಳ ಮತ್ತು ಕಡಿಮೆ ಖರ್ಚಿನ ಆ್ಯಂಟಿ-ವೈರಸ್ ವೆಂಟಿಲೇಷನ್ ವ್ಯವಸ್ಥೆ ಮಾಡಿಕೊಂಡು ಗಮನ ಸೆಳೆದಿದೆ. ಚಳಿಗಾಲದ ಸಂದರ್ಭದಲ್ಲಿ ಸೋಂಕು ಹರಡದಂತೆ ತಡೆಯಲು ಈ ಕಲ್ಪನೆ ಮೊಳಕೆಯೊಡೆದಿದೆ.
ಶಿಕ್ಷಕರೊಬ್ಬರ ವಿಜ್ಞಾನಿ ಪತಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಇದು ಕಿಚನ್ ಎಕ್ಸ್‌ಟ್ರಾಕ್ಟರ್ ಫ್ಯಾನ್‌ನಂತೆ ಕಾರ್ಯನಿರ್ವಹಿಸುತ್ತದೆ ಎಂದು ಐಜಿಎಸ್ ಮೈಂಜ್-ಬ್ರೆಟ್ಜೆನ್‌ಹೈಮ್ ಮಾಧ್ಯಮಿಕ ಶಾಲೆಯಲ್ಲಿ ಇದನ್ನು ಅಳವಡಿಸಿದ ಸಂಶೋಧಕ ಫ್ರಾಂಕ್ ಹೆಲ್ಲಿಸ್ ಹೇಳಿದ್ದಾರೆ.
ವಿದ್ಯಾರ್ಥಿಗಳಿಂದ ಹೊರಹಾಕಲ್ಪಟ್ಟ ಬೆಚ್ಚಗಿನ ಉಸಿರು ಹೊರಗೆ ಒಯ್ಯುವಂತೆ ಪ್ರತಿ ಬೆಂಚ್‌ನಿಂದ ಪೈಪ್ ವ್ಯವಸ್ಥೆ ಮಾಡಲಾಗಿದೆ. ಹೀಗಾದಾಗ ಸೋಂಕಿದ್ದರೂ ಅದು ಕೋಣೆಯಲ್ಲಿ ಹರಡುವ ಮೊದಲು ಹೊರಗೆ ತಳ್ಳಲ್ಪಡುತ್ತದೆ.
ಮಾರುಕಟ್ಟೆಯಲ್ಲಿನ ಅತ್ಯಂತ ಹೈಟೆಕ್ ವಾಯು ಶುದ್ಧೀಕರಣ ಪ್ರಾಡಕ್ಟ್‌ಗಳಿಗೆ ಸರಿಸಮನಾಗಿ ಇದು ಕಾರ್ಯನಿರ್ವಹಣೆ ಮಾಡುತ್ತಿದ್ದು, ಕೋಣೆಯಿಂದ 90 ಪ್ರತಿಶತದಷ್ಟು ಏರೋಸಾಲ್‌ಗಳನ್ನು ಹೊರಹಾಕುವಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ತೋರಿಸಿದೆ.