ಸಾಕುನಾಯಿಗಳೇ ಹಾಗೆ. ಮನೆಗೆ ಬಂದ ಘಳಿಗೆಯಿಂದಲೇ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ಬಿಡುವ ಇವು, ಮನೆಯೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಂಡು ಬಿಡುತ್ತವೆ.
ಮನೆಯ ಸದಸ್ಯರ ಬುದ್ಧಿಗಳೇ ನಾಯಿಗಳಿಗೂ ಬರುತ್ತದೆ ಎಂದು ಸಾಕಷ್ಟು ಮಂದಿ ತಿಳಿದವರು ಹಾಗೂ ಪ್ರಾಣಿಪಾಲಕರು ಹೇಳುತ್ತಾರೆ. ಇದೇ ಮಾತನ್ನು ಪ್ರಚುರಪಡಿಸುವ ಸಂಗತಿಯೊಂದರ ವಿಡಿಯೋ ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ.
ವ್ಯಾಟ್ಸನ್ ಹಾಗೂ ಕಿಕೋ ಹೆಸರಿನ ಒಂದೇ ಮನೆಯ ನಾಯಿಗಳ ಪ್ರಹಸನವೊಂದು ಬಲೇ ಕ್ಯೂಟ್ ಆಗಿದ್ದು, ನೆಟ್ಟಿಗರ ಹೃದಯ ಸೂರೆಗೊಂಡಿದೆ.
https://twitter.com/humorandanimals/status/1275815440762224640?ref_src=twsrc%5Etfw%7Ctwcamp%5Etweetembed%7Ctwterm%5E1275815440762224640%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fthis-dogs-way-to-apologize-to-his-brother-after-stealing-his-food-has-won-the-internet-watch%2F611973