
ಮನೆಗಳಲ್ಲಿ ನಾಯಿ ಅಥವಾ ಬೆಕ್ಕುಗಳಂಥ ಸಾಕು ಪ್ರಾಣಿಗಳಿದ್ದಲ್ಲಿ, ಅವುಗಳ ತುಂಟತನವನ್ನು ನೋಡಿಕೊಂಡು ಎಂಜಾಯ್ ಮಾಡುವುದು ಒಂದು ರೀತಿಯ ವಿನೋದದ ಕೆಲಸ.
ಸಾಕು ನಾಯಿಯೊಂದಕ್ಕೆ ಅದರ ಮನೆಯವರು ತಿನ್ನಲು ತಿಂಡಿ ಕೊಡುತ್ತಲೇ ಅದಕ್ಕೆ ಬಲೇ ಖುಷಿಯಾಗಿ ಕುಣಿದು ಕುಪ್ಪಳಿಸುವ ವಿಡಿಯೋವೊಂದು ವೈರಲ್ ಆಗಿದೆ.
ತನಗೆ ಹಾಕಿದ ತಿಂಡಿಯ ವಾಸನೆ ಗ್ರಹಿಸಿಕೊಂಡು, ಅದನ್ನು ಬಾಯಲ್ಲಿ ತೆಗೆದುಕೊಂಡ ಕೆಲವೇ ಸೆಕೆಂಡ್‌ಗಳ ಬಳಿಕ ಅತಿ ಉತ್ಸಾಹದಲ್ಲಿ ಈ ಶ್ವಾನವು ಹುಚ್ಚೆದ್ದು ಕುಣಿದಿದೆ.