ಕುಡಿದ ನೀರು ಅಲ್ಲಾಡದಂತೆ ನೋಡಿಕೊಳ್ಳುವುದು ಎಂದರೆ ಇದೇ ಇರಬೇಕು. ತನ್ನ ಮುದ್ದಿನ ನಾಯಿ ಮೆಟ್ಟಿಲಿಳಿದರೆ ಸವೆದು ಹೋಗಬಹುದೇನೋ ಅನ್ನುವಂತೆ ಅದಕ್ಕಾಗಿ ಈತ ಡಬ್ಬಲ್ ಡೆಕ್ಕರ್ ಬಸ್ ನ ವ್ಯವಸ್ಥೆ ಮಾಡಿದ್ದಾನೆ.
ನಾಯಿ ಅದರೊಳಗೆ ಕುಳಿತ ಕೂಡಲೇ ಅದು ಮೇಲಿನಿಂದ ಕೆಳಗೆ, ಕೆಳಗಿನಿಂದ ಮೇಲಕ್ಕೆ ನಾಯಿಯನ್ನು ಒಯ್ಯುತ್ತದೆ.
ಹೌದು, ಈ ಮಿನಿ ಬಸ್ ವ್ಯವಸ್ಥೆಯನ್ನ ತನ್ನ ಮುದ್ದಿನ ನಾಯಿಗಾಗಿಯೇ ಮಾಡಿದ್ದು ನಿಜ. ಆದರೆ, ಅದು ಐಷಾರಾಮಕ್ಕಾಗಿ ಅಲ್ಲ.
ಸಂಧಿವಾತ (ಆರ್ಥರೈಟಿಸ್) ರೋಗದಿಂದ ಬಳಲುತ್ತಿರುವ ನಾಯಿಯ ಸ್ನಾಯು, ಮೃದ್ವಸ್ಥಿ ದುರ್ಬಲಗೊಂಡಿದ್ದು, ನಡೆದಾಡಿದರೆ ಬಿದ್ದೇ ಹೋಗುತ್ತಿದೆ.
ಹೀಗಾಗಿ ಫುಟ್ ಬಾಲ್ ಆಟಗಾರ ರೆಕ್ಸ್ ಚಾಂಪಿಯನ್, ತಮ್ಮ ಮನೆಯೊಳಗೆ ನಾಯಿಗಾಗಿ ಮೆಟ್ಟಿಲುಗಳ ಪಕ್ಕದಲ್ಲೇ ಲಿಫ್ಟ್ ಮಾದರಿಯ ಬಸ್ ಮಾಡಿಸಿದ್ದಾರೆ.
ಕಾಯಿಲೆಗೆ ತುತ್ತಾಗಿರುವ ಮುದ್ದಿನ ನಾಯಿಯನ್ನ ಆರೈಕೆ ಮಾಡುವುದಷ್ಟೇ ಅಲ್ಲದೆ, ಅದಕ್ಕಾಗಿ ತಂತ್ರಜ್ಞಾನಗಳನ್ನು ಹೀಗೂ ಸದ್ಬಳಕೆ ಮಾಡಿಕೊಳ್ಳಬಹುದು.