ಕೆಲವೊಂದು ಸ್ಮಾರ್ಟ್ ನಾಯಿಗಳು ತಮ್ಮ ಚತುರಮತಿ ನಡೆಗಳಿಂದ ನೆಟ್ಟಿಗರ ಮನಗೆಲ್ಲುವ ಅನೇಕ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ.
ಚೀನಾದಲ್ಲಿ ಕಾರ್ಗಿಸ್ ಹೆಸರಿನ ಮೂರು ವರ್ಷದ ನಾಯಿಯೊಂದು ಬ್ಯಾಸ್ಕೆಟ್‌ಬಾಲ್ ಆಡುವ ತನ್ನ ವಿಶಿಷ್ಟ ಕೌಶಲ್ಯದಿಂದ ನೆಟ್ಟಿಗರ ಗಮನ ಸೆಳೆಯುತ್ತಿದೆ. ಶಿಯಾವೋ ಬಾ ಅಥವಾ ’ಲಿಟಲ್ ಏಟ್’ ಎಂದು ಕರೆಯಲ್ಪಡುವ ಈ ಶ್ವಾನವು ತನ್ನ ಡ್ರಿಬ್ಲಿಂಗ್ ನಡೆಗಳಿಂದ ಬ್ಯಾಸ್ಕೆಟ್ ಬಾಲ್ ಅನ್ನು ತಳ್ಳುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ನೆಟ್ಟಿಗರು ಈ ಸ್ಮಾರ್ಟ್ ಶ್ವಾನವನ್ನು ಬ್ಯಾಸ್ಕೆಟ್‌ಬಾಲ್ ದಂತಕಥೆ ಕೋಬೆ ಬ್ರಿಯಾಂಟ್‌ಗೆ ಹೋಲಿಕೆ ಮಾಡುತ್ತಿದ್ದು, ’ಕಾರ್ಗಿಸ್‌ನ ಕಾರ್-ಬೇ ಬ್ರಯಾಂಟ್’ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದಾರೆ.