ಗ್ರಾಹಕರನ್ನು ಸೆಳೆಯಲು ಉದ್ಯಮ ವಲಯ ಹೊಸ ಹೊಸ ಆವಿಷ್ಕಾರ ಮಾಡುವುದು ಸಹಜ, ಆಸ್ಟ್ರೇಲಿಯಾದ ಕಂಪನಿಯೊಂದು ಮೈಕ್ರೊವೇವ್ ಚಪ್ಪಲಿಗಳನ್ನು ಮಾರಾಟ ಮಾಡುತ್ತಿದೆ.
ಟಾರ್ಗೆಟ್ ಹೆಸರಿನ ಆಸ್ಟ್ರೇಲಿಯಾದ ಡಿಪಾರ್ಟ್ಮೆಂಟ್ ಸ್ಟೋರ್ ಚೈನ್ ಲಿಂಕ್ ಮೈಕ್ರೊವೇವ್ ಚಪ್ಪಲಿಗಳನ್ನು ಮಾರಾಟ ಮಾಡುತ್ತಿದ್ದು, ಕಾಲನ್ನು ಬೆಚ್ಚಗಿಡಲು ಇದು ಸಹಕಾರಿಯಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ʼಪ್ಲಾಸ್ಮಾʼ ದಾನಿ ಹುಡುಕಲು ನೆರವಾಯ್ತು ಡೇಟಿಂಗ್ ಆಪ್
ಪಾಲಿಯೆಸ್ಟರ್ ಪಾದರಕ್ಷೆಗಳನ್ನು ಮೈಕ್ರೊವೇವ್‌ನಲ್ಲಿ ಒಂದೆರಡು ಸೆಕೆಂಡುಗಳ ಕಾಲ ಹಾಕಬಹುದು. ಚಪ್ಪಲಿಗಳು ಬೆಚ್ಚಗಿರುವಾಗ, ನೋವುಗಳನ್ನು ನಿವಾರಿಸಬಹುದು ಮತ್ತು ಉಳುಕು ಮತ್ತು ಮೂಗೇಟುಗಳಿಂದ ತಾತ್ಕಾಲಿಕ ಪರಿಹಾರ ಪಡೆಯಬಹುದು ಎಂದು ಕಂಪನಿ ಹೇಳಿದೆ.
ಒಂದು ಗಾತ್ರದಲ್ಲಿ ಮಾತ್ರ ಲಭ್ಯವಾಗುತ್ತಿರುವ ಪಾದರಕ್ಷೆಗೆ ಇಪ್ಪತ್ತು ಡಾಲರ್ ನಿಗದಿ ಮಾಡಲಾಗಿದೆ. ಅವುಗಳ ಕವರ್ ಪಾಲಿಯೆಸ್ಟರ್‌ನಿಂದ ಹಾಗೂ ಒಳಗಿನ ಪದರ ಸಿಲಿಕಾ ಮಣಿಗಳಿಂದ ಕೂಡಿದೆ.