alex Certify ಹೊಟ್ಟೆ ಹಸಿದಾಗ ಸಿಟ್ಟಿನಲ್ಲಿ ಪಿಯಾನೋ ಬಾರಿಸುತ್ತೆ ಬೆಕ್ಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹಸಿದಾಗ ಸಿಟ್ಟಿನಲ್ಲಿ ಪಿಯಾನೋ ಬಾರಿಸುತ್ತೆ ಬೆಕ್ಕು

ಹೊಟ್ಟೆ ಹಸಿದರೆ ನಾವೇನು ಮಾಡುತ್ತೇವೆ ? ಅಡುಗೆ ಮಾಡಿಕೊಂಡು ಊಟ ಮಾಡುತ್ತೇವೆ. ನಮ್ಮನ್ನೇ ನಂಬಿದ ಮೂಕಪ್ರಾಣಿಗಳು ಏನು ಮಾಡಬಲ್ಲವು ?

ದನಕರುಗಳಾದರೆ ಅಂಬಾ ಎನ್ನುತ್ತವೆ, ನಾಯಿಯಾದರೆ ಬೊಗಳುತ್ತದೆ, ಬೆಕ್ಕುಗಳಾದರೆ ಮಿಯಾಂವ್ ಎನ್ನುತ್ತವೆ…..ಹೀಗೆ ಅವುಗಳದ್ದೇ ಭಾಷೆಯಲ್ಲಿ ಅರಿಕೆ ಮಾಡಿಕೊಳ್ಳುತ್ತವೆ.

ಆದರೆ, ಈ ಬೆಕ್ಕಿಗೆ ಹಸಿದಾಗ ತಿನ್ನಲು ಕೊಡದಿದ್ದರೆ ಸಿಟ್ಟಿನಲ್ಲಿ ಪಿಯಾನೋ ಬಾರಿಸಲು ಶುರು ಮಾಡುತ್ತದೆ.

ವಿಚಿತ್ರ ಎನಿಸುತ್ತಿದೆ ಅಲ್ಲವೇ ? ಹೌದು, ಕೇಟ್ ಎಂಬಾಕೆ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಬೆಕ್ಕೊಂದು ಪಿಯಾನೋ ಮುಂದೆ ಕುಳಿತಿರುತ್ತದೆ. ಇದು ಊಟದ ಸಮಯವಾ ಎಂದು ಬೆಕ್ಕಿನ ಮಾಲೀಕರು ಪ್ರಶ್ನಿಸಿದಾಗ ಕಣ್ಣುಗಳನ್ನು ಹೊರಳಿಸಿ ಹೌದು ಎನ್ನುವ ಅರ್ಥದಲ್ಲಿ ಮಿಯಾಂವ್ ಎನ್ನುತ್ತದೆ.

ಯಾವಾಗ ಊಟದ ಸಮಯ ? ಈಗಲ್ಲ. ನೀನಿನ್ನೂ ಕಾಯಬೇಕು ಎಂದ ಮಾಲೀಕರ ಮಾತು ಕೇಳಿ ಸಿಟ್ಟಾದ ಬೆಕ್ಕು ತನ್ನ ಮುಂದಿದ್ದ ಪಿಯಾನೋ ಮೇಲೆ ಕೈ ಆಡಿಸಲು ಶುರು ಮಾಡುತ್ತಿದೆ. ಮಾಲೀಕರು – ಬೆಕ್ಕಿನ ಈ ಮುದ್ದಾದ 26 ಸೆಕೆಂಡಿನ ವಿಡಿಯೋ 9 ಲಕ್ಷ ಮಂದಿ ವೀಕ್ಷಿಸಿದ್ದು, 85 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...