ಕೆಲವೊಂದು ಸೈ-ಫೈ ಚಿತ್ರಗಳು ಅನ್ಯಗ್ರಹ ಜೀವಿಗಳ ಕಲ್ಪನೆಯನ್ನು ಜೀವಂತ ರೂಪದಲ್ಲಿ ತೋರುವ ಯತ್ನ ಮಾಡುತ್ತವೆ. ಆದರೆ ಅವುಗಳಲ್ಲಿ ಒಂದೇ ಒಂದು ಚಿತ್ರದಲ್ಲಿ ನಿಜವಾದ ಗಗನಯಾತ್ರಿಯೊಬ್ಬ ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವ ಹಾರುವ ಅನಾಮಧೇಯ ವಸ್ತುವನ್ನು ಎದುರಿಸುವ ನೈಜ ದೃಶ್ಯಾವಳಿ ತೋರುವುದಿಲ್ಲ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಬ್ರಿಟೀಷ್ ಗಗನಯಾತ್ರಿ ಟಿಮ್ ಪೀಕ್, ಗ್ರಹಮ್ ನಾರ್ಟನ್ ಶೋ ವೇಳೆ, ತಾವು ಇತ್ತೀಚೆಗೆ ಯುಎಫ್‌ಓ ಒಂದನ್ನು ನೋಡಿದ್ದಾಗಿ ತಿಳಿಸಿದ್ದಾರೆ. 2015ರಲ್ಲಿ ಆರು ತಿಂಗಳ ಮಟ್ಟಿಗೆ ಬಾಹ್ಯಾಕಾಶದಲ್ಲಿ ಕಾಲ ಕಳೆದ ಮೇಜರ್ ಪೀಕ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಾಲ ಕಳೆದ ಮೊದಲ ಬ್ರಿಟೀಷ್ ಗಗನಯಾತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಐಎಸ್‌ಎಸ್‌ನಲ್ಲಿ ಇದ್ದ ವೇಳೆ ನಡೆದ ಘಟನೆಯೊಂದನ್ನು ಶೇರ್ ಮಾಡಿಕೊಂಡಿರುವ ಮೇಜರ್ ಪೀಕ್, ತಮ್ಮತ್ತ ಮೂರು ನಿಗೂಢ ಬೆಳಕಿನ ವಸ್ತುಗಳು ತಮ್ಮತ್ತ ಬರುತ್ತಿರುವುದನ್ನು ಕಂಡಿದ್ದು, ಅವೆಲ್ಲಾ ಅನ್ಯಗ್ರಹ ಜೀವಿಗಳ ಗಗನನೌಕೆಗಳಿಂದ ಬರುತ್ತಿವೆ ಎಂದುಕೊಂಡಿದ್ದರಂತೆ.
ಆದರೆ ಕೆಲ ಹೊತ್ತಿನ ಬಳಿಕ ಆ ಬೆಳಕಿನ ವಸ್ತುಗಳು ಬೇರೇನೂ ಅಲ್ಲದೇ, ಅಲ್ಲೇ ಸಮೀಪವಿದ್ದ ರಷ್ಯಾದ ಗಗನನೌಕೆಯೊಂದರಿಂದ ಹೊರಬಂದ ಮೂತ್ರದ ಹನಿಗಳು ಘನೀಕರಣಗೊಂಡು ಬೆಳಕನ್ನು ಪ್ರತಿಫಲಿಸುತ್ತಿವೆ ಎಂದು ತಿಳಿದು ಬಂತಂತೆ!