ಜಾಗದ ಅಭಾವ ಇರುವ ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಗಗನಮುಖಿಯಾಗಿಯೇ ಇರುತ್ತವೆ. ಅದು ವಸತಿ ಉದ್ದೇಶಕ್ಕೆ ಆಗಲಿ ಅಥವಾ ವಾಣಿಜ್ಯೋದ್ದೇಶಕ್ಕೆ ಆಗಲಿ, ಜಾಗಕ್ಕಂತೂ ಬೇಡಿಕೆ ಸಿಕ್ಕಾಪಟ್ಟೆ ಇರುತ್ತದೆ.
ಪ್ರಾಪರ್ಟಿ ಖರೀದಿ ಮಾಡುವ ಮಂದಿಗೆ ಸಾಕಷ್ಟು ಜಾಗ ಹಾಗೂ ಸುರಕ್ಷತೆಗಳ ಲೆಕ್ಕಾಚಾರವೇ ಮುಖ್ಯ ಮಾನದಂಡವಾಗಿರುತ್ತವೆ. ಈ ಎರಡೂ ಮಾನದಂಡಗಳಲ್ಲಿ 100ಕ್ಕೆ 100 ಎಂಬಂತಿರುವ ಜಾಗವೆಂದರೆ ಅದು ಜೈಲು ಎನ್ನಬಹುದೇ?
ವರ್ಮಾಂಟ್‌ನ ಗೈಡಾಲ್‌ನಲ್ಲಿರುವ ನಾಲ್ಕು ಕೋಣೆಗಳ ಮನೆಯೊಂದನ್ನು $1,49,000 (1.08 ಕೋಟಿ ರೂ.ಗಳು) ಬೆಲೆಗೆ ಮಾರಾಟಕ್ಕೆ ಇಡಲಾಗಿದೆ. ಹೊರಗಡೆಯಿಂದ ಸಹಜವಾದ ಕಟ್ಟಡದಂತೆಯೇ ಕಾಣುವ ಈ ಜಾಗದ ವಿಸ್ತಾರ 2,190 ಚದರ ಅಡಿಯಷ್ಟಿದೆ. ಆದರೆ ಈ ಬಿಲ್ಡಿಂಗ್ ಒಳಗೆ ಇರುವ ಫೀಚರ್‌ಗಳು ದಂಗು ಬೀಳಿಸುವಂತಿವೆ. ಮನೆ ಒಳಗೆ ನಾಲ್ಕು ಬೆಡ್‌ರೂಂಗಳು ಹಾಗು ಏಳು ಜೈಲ್ ಸೆಲ್‌ಗಳು ಇವೆ ಎಂದು ರಿಯಲ್ ಎಸ್ಟೇಟ್ ಜಾಲತಾಣವೊಂದು ತಿಳಿಸುತ್ತಿದೆ. ಈ ಮನೆಯು 1969ರ ತನಕ ಎಸ್ಸೆಕ್ಸ್ ಕೌಂಟಿ ಜೈಲಾಗಿತ್ತು. ಈ ಜಾಗದ ಬಹುಪಾಲು ಒಡೆತನ ಜೈಲರ್‌ನದ್ದಾಗಿತ್ತು.