ಈತನ ಹೆಸರು ಜೇಸನ್ ಸ್ಟಾರ್ಮ್. ಅಮೆರಿಕಾದ ಅರಿಝೋನಾದ ವಾಸಿ. ತನ್ನ ಪಾದಗಳ ಚಿತ್ರಗಳನ್ನು ಮಾರಾಟ ಮಾಡಿಯೇ ತಿಂಗಳಿಗೆ 2.90 ಲಕ್ಷ ರೂ. ಆದಾಯ ಗಳಿಸಿ ಸುದ್ದಿಯಾಗಿದ್ದಾನೆ.
ಪ್ರತಿಯೊಬ್ಬರೂ ಉಪ ವೃತ್ತಿ ಮೂಲಕ ಹೆಚ್ಚುವರಿ ಹಣವನ್ನು ಗಳಿಸಲು ಇಷ್ಟಪಡುತ್ತಾರೆ. ಕೆಲವು ಸಂದರ್ಭಗಳಲ್ಲಿ, ಉಪ ವೃತ್ತಿ ಮೇಲೆ ಪ್ರೀತಿ ಹೆಚ್ಚಿ ಅಥವಾ ಆದಾಯ ಹೆಚ್ಚಾಗಿ ತಮ್ಮ ಮುಖ್ಯ ಕೆಲಸವನ್ನು ತ್ಯಜಿಸಲು ನಿರ್ಧರಿಸುತ್ತಾರೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಅನೇಕರು ಉಪ ವೃತ್ತಿ ಮಾಡುತ್ತಿದ್ದಾರೆ ಎಂಬುದು ವಿಶೇಷ ಸಂಗತಿ. ಆತ ಕೂಡ ಇನ್ ಸ್ಟಾ ಗ್ರಾಂ ಮೂಲಕ ಉದ್ಯಮ ಬೆಳೆಸಿಕೊಂಡಿದ್ದಾನೆ.
35 ವರ್ಷದ ಸ್ಟ್ರೋಮ್ ವೆಬ್ ಕ್ಯಾಮೆರ್ ಆಗಿದ್ದು, ಗ್ರಾಹಕರೊಬ್ಬರು ಅವನ ಪಾದಗಳ ಕೆಳಭಾಗವನ್ನು ಮಾತ್ರ ತೋರಿಸಬೇಕೆಂದು ವಿನಂತಿಸಿದಾಗ, ಅದರಿಂದ ಹಣವನ್ನು ಸಂಪಾದಿಸಬಹುದೆಂದು ಆತ ಈ ಉದ್ಯೋಗ ಪ್ರಾರಂಭಿಸಿದ.
ಪಾದಗಳ ಚಿತ್ರಗಳಿಗಾಗಿ ಮಾತ್ರ ಇನ್ ಸ್ಟಾ ಗ್ರಾಂ ಖಾತೆಯನ್ನು ಸ್ಥಾಪಿಸಿದ್ದು, ಈಗ ಅವರ ಪುಟವು 5,000 ಕ್ಕೂ ಹೆಚ್ಚು ಫಾಲೋಯರ್ ಗಳನ್ನು ಹೊಂದಿದೆ. ಉತ್ತಮ ಪ್ರತಿಕ್ರಿಯೆ ಬರಲಾರಂಭವಾಗುತ್ತಿದ್ದಂತೆ ತನ್ನ ಹಣ ಸಂಪಾದಿಸುವ ಉದ್ದೇಶದಿಂದ ಓನ್ಲಿ ಫ್ಯಾನ್ಸ್ ಆಪ್ಶನ್ ಮಾಡಿಕೊಂಡರು. ಚಂದಾದಾರಿಕೆ ಮಾಡಿಕೊಂಡ ಪರಿಣಾಮ ಆದಾಯ ಬರಲಾರಂಭವಾಗಿದೆ.
https://www.instagram.com/p/CELsSHwHSa1/?utm_source=ig_embed
https://www.instagram.com/p/CCnLmxVHzO5/?utm_source=ig_embed
https://www.instagram.com/p/CD9jxBzHsdg/?utm_source=ig_embed