ಕಾರುಗಳನ್ನ ಖರೀದಿ ಮಾಡುವ ಮುನ್ನ ಯಾರಿಗಾದರೂ ಟೆಸ್ಟ್ ಡ್ರೈವ್ಗೆ ಕೊಡಬೇಕು ಅಂದರೆ ನೂರು ಬಾರಿ ಯೋಚಿಸಬೇಕಾಗುತ್ತೆ. ಏಕೆಂದರೆ ಇಂತಹ ಹಲವು ಪ್ರಕರಣಗಳಲ್ಲಿ ಮಾಲೀಕರಿಗೆ ಗ್ರಾಹಕರ ರೂಪದಲ್ಲಿ ಬಂದ ಕಳ್ಳರು ಚಳ್ಳೆಹಣ್ಣು ತಿನ್ನಿಸಿದ ಉದಾಹರಣೆಗಳನ್ನ ನಾವು ಕೇಳಿರ್ತೇವೆ.
ಇಂತಹದ್ದೇ ಒಂದು ಘಟನೆ ಇದೀಗ ವೆಸ್ಟ್ ಮಿಡ್ಲ್ಯಾಂಡ್ಸ್ನಲ್ಲಿ ನಡೆದಿದೆ. ಟೆಸ್ಟ್ ಡ್ರೈವ್ಗೆ ಕಾರನ್ನ ಕೊಂಡೊಯ್ದ ವ್ಯಕ್ತಿ ಕಾರು ಎಲ್ಲಿದೆ ಎಂಬ ವಿಚಾರವನ್ನ ಬಹಿರಂಗ ಪಡಿಸೋಕೆ ಮಾಲೀಕನ ಬಳಿಕ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.
27 ವರ್ಷದ ಜ್ಯಾಕ್ ಬೇಟ್ಸನ್ ಎಂಬವರು ತಮ್ಮ ಕಾರೊಂದನ್ನ ಮಾರಾಟಕ್ಕೆ ಇರಿಸಿದ್ದರು. ಏಪ್ರಿಲ್ 12 ರಂದು ಗ್ರಾಹಕರ ಸೋಗಿನಲ್ಲಿ ಬಂದ ಕಿಡಿಗೇಡಿ ಟೆಸ್ಟ್ ಡ್ರೈವ್ಗೆ ಅಂತಾ ಕಾರನ್ನ ಕೊಂಡೊಯ್ದಿದ್ದಾನೆ.
ಆದರೆ ತನ್ನ ಕಾರು ಕಳುವಾಗಿದೆ ಎಂದು ಕೆಲ ಸಮಯದಲ್ಲೇ ಜ್ಯಾಕ್ ಅರಿವಿಗೆ ಬಂದಿದೆ. ಹಾಗು ಈ ಕಾರು ಎಲ್ಲಿದೆ ಅಂತಾ ತಿಳಿಸಿಬೇಕು ಅಂದರೆ 50 ಸಾವಿರ ರೂಪಾಯಿ ನೀಡಬೇಕು ಎಂದು ಕಳ್ಳ ಬೇಡಿಕೆ ಇಟ್ಟಿದ್ದಾನೆ.
ವರದಿಗಳ ಪ್ರಕಾರ ಜ್ಯಾಕ್ನ ಸ್ನೇಹಿತನ ಕಾರನ್ನೂ ಕೆಲ ವಾರಗಳ ಮುನ್ನ ಇದೇ ಕಳ್ಳ ಕದ್ದಿದ್ದನಂತೆ. ಹೀಗಾಗಿ ಜ್ಯಾಕ್ ಹಾಗೂ ಆತನ ಸ್ನೇಹಿತ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.