
ಕೊರೊನಾ ಲಾಕ್ ಡೌನ್ ಸಮಯದಲ್ಲಿ ಜಗತ್ತಿನ ವಿವಿಧೆಡೆಗಳಲ್ಲಿ ಜನರಿಗೆ ಒಂದೊಂದು ರೀತಿಯ ಸಂಕಟ ಎನ್ನುವಂತಾಗಿದೆ. ತಮ್ಮ ಕುಟುಂಬಗಳಿಂದ ದೂರ ಉಳಿದುಕೊಂಡು, ವೃದ್ದಾಶ್ರಮಗಳಲ್ಲಿ ನೆಲೆಸಿರುವ ಹಿರಿಯ ನಾಗರಿಕರದ್ದು ಹೇಳತೀರದ ಸಂಕಟವಾಗಿದೆ.
ಟೆಕ್ಸಾಸ್‌ನ ಹಿಲ್ಸ್‌ಬೋರೋದಲ್ಲಿರುವ ವೃದ್ಧಾಶ್ರಮವೊಂದರಲ್ಲಿ ಬೇಜಾರಿನ ಕ್ಷಣಗಳನ್ನು ಕಳೆಯಲೆಂದು ಮನರಂಜನೆಗಾಗಿ ಮೋಜಿನ ಕೂಟಗಳನ್ನು ಮಾಡಿಕೊಂಡು, ಮದಿರೆಯ ನಶೆಯೇರಿಸಿಕೊಂಡು, ಹಾಗೇ ಟ್ಯಾಟೂಗಳನ್ನು ಹಾಕಿಸಿಕೊಂಡು ಖುಷಿ ಪಟ್ಟಿದ್ದಾರೆ.
ವೆಸ್ಲೇ ವೃದ್ಧಾಶ್ರಮದ ಅಧಿಕೃತ ಫೇಸ್ಬುಕ್ ಪೇಜ್‌ನಲ್ಲಿ ಈ ಹಿರಿಯ ಜೀವಗಳ ಮಸ್ತಿಯ ಫೊಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ.
https://www.facebook.com/hillsboroassistedliving/photos/a.353750518058203/2741375572629007/?type=3
https://www.facebook.com/hillsboroassistedliving/photos/a.353750518058203/2741375199295711/?type=3