ಇತ್ತೀಚಿನ ದಿನದಲ್ಲಿ ವಿಶ್ವದ ಅಂತ್ಯದ ಬಗ್ಗೆ ಹಲವು ಚರ್ಚೆಗಳು ಕೇಳಿಬರುತ್ತಿವೆ. ಆದರೀಗ ಭೌತಶಾಸ್ತ್ರ ಖಗೋಳ ವಿಜ್ಞಾನಿಯೊಬ್ಬರ ಪ್ರಕಾರ, ವಿಶ್ವದ ಅಂತ್ಯವನ್ನು ನಾವ್ಯಾರು ನೋಡಲು ಸಾಧ್ಯವಿಲ್ಲವಂತೆ.
ಹೌದು, ಇಲಿನಾಯ್ಸ್ ವಿಶ್ವವಿದ್ಯಾಲಯದ ಸಹಾಯಕ ಉಪನ್ಯಾಸಕ ಮ್ಯಾಟ್ ಕ್ಯಾಪ್ಲಾನ್ ಪ್ರಕಾರ, ಬ್ಲ್ಯಾಕ್ ಡ್ವಾರ್ಜ್ ನಕ್ಷತ್ರ ಭೂಮಿ ಅಪ್ಪಳಿಸುವುದು ವಿಶ್ವದ ಅಂತ್ಯ. ಆದರೆ ಇದು 10*10000 ವರ್ಷದ ಬಳಿಕ ನಡೆಯಲಿದೆ ಎಂದು ಅಂದಾಜಿಸಿದ್ದಾರೆ.
ಈ ಧೂಮಕೇತು ಅಪ್ಪಳಿಸಿದಾಗ ಇಡೀ ವಿಶ್ವ ಏಕಾಂಗಿ, ಚಳಿಯ ಸ್ಥಳವಾಗಿರುತ್ತದೆ. ಆ ವೇಳೆಗೆ ವಿಶ್ವದ ಬಹುಜಾಗ ಕಪ್ಪು ರಂಧ್ರಗಳಿಂದ ತುಂಬಿ ಹೋಗಿರುತ್ತದೆ ಎಂದು ಹೇಳಿದ್ದಾರೆ. ಈ ವಾದಕ್ಕೆ ಪ್ರತಿಯಾಗಿ ಗ್ರೇಗರಿ ಲಾಘಗನ್ ಎನ್ನುವವರು ಪ್ರತಿಕ್ರಿಯಿಸಿದ್ದು, ಇಂದಿನ ಸ್ಥಿತಿಗೆ ಅನುಗುಣವಾಗಿ ನಾವು ಲೆಕ್ಕಹಾಕುತ್ತೇವೆ. ಆದರೆ ಪ್ರಕೃತಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ ಎಂದಿದ್ದಾರೆ.