ಲಾಕ್ ಡೌನ್ ಅವಧಿಯ ಬೋರಿಂಗ್ ಕಳೆಯಲು ಅನೇಕ ಜನರು ಒಂದಲ್ಲ ಒಂದು ರೀತಿಯ ಹೊಸ ಬಗೆಯ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಹೊಸ ಬಗೆಯ ಅಡುಗೆಯಿಂದ ಇಂಟೀರಿಯರ್ ಡಿಸೈನಿಂಗ್ ವರೆಗೂ ವಿನೂತನ ಐಡಿಯಾಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅಮೆರಿಕಾದ ವ್ಯಕ್ತಿಯೊಬ್ಬರು ಲಾಕ್ ಡೌನ್ ಅವಧಿಯಲ್ಲಿ ತಮ್ಮ ಮೆಚ್ಚಿನ ಪೇಯವಾದ ಕಾಫಿ ಕುಡಿಯಲು ಸಮೀಪದ ಕೆಫೆಗಳಿಗೆ ಭೇಟಿ ನೀಡಲಾಗದೇ ಒದ್ದಾಡುತ್ತಿದ್ದರು. ಯಾಕೋ ಈ ಲಾಕ್‌ಡೌನ್ ಸದ್ಯಕ್ಕೆ ಕೊನೆಯಾಗುವಂತೆ ಕಾಣದೇ ಇರುವ ಕಾರಣ, ಅವರು ತಮ್ಮ ಮನೆಯ ಹಿಂಬದಿಯ ಅಂಗಳದಲ್ಲೇ ಕಾಫಿ ಬಾರ್ ಒಂದನ್ನು ಮಾಡಿಕೊಂಡಿದ್ದಾರೆ.
ತನ್ನ ತಂದೆ ಮಾಡಿದ ಈ ಕಾಫಿ ಬಾರ್ ಚಿತ್ರವನ್ನು ಮಗಳು ಜೂಲಿಯಾನಾ ಆಸ್ಟ್ರಿಡ್ ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಫುಲ್ ಟೈಮ್ ಕಾಂಟ್ರಾಕ್ಟರ್ ಆಗಿರುವ ತಮ್ಮ ತಂದೆ ಸೈಡ್ ವರ್ಕ್ ಆಗಿ ಈ ಕೆಲಸ ಮಾಡಿದ್ದಾರೆ ಎಂದು ಜೂಲಿಯಾನಾ ಹೇಳಿಕೊಂಡಿದ್ದಾರೆ.