ಅಮೆರಿಕ ಟು ಸಿಂಗಾಪುರಕ್ಕೆ ಸಾಗುವ ವಿಶ್ವದ ಅತಿ ಉದ್ದದ ವಿಮಾನ ಇದೀಗ ತನ್ನ ಒಟ್ಟು ಹಾರಾಟ ಸಮಯವನ್ನೂ ಸುದೀರ್ಘ ಮಾಡಿಕೊಳ್ಳಲು ಹೊರಟಿದೆ.
ಸಿಂಗಾಪುರ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್ ವಿಮಾನ ನಿಲ್ದಾಣವರೆಗೆ ಈ ವಿಶ್ವದ ಅತಿ ಉದ್ದದ ವಿಮಾನ ಹಾರಾಟ ನಡೆಸುತ್ತಿತ್ತು. ಇದು 18 ತಾಸುಗಳ ಕಾಲ ತನ್ನ ಹಾರಾಟ ನಡೆಸುತ್ತಿತ್ತು.
ಆದರೆ ಈಗ ತನ್ನ ಅಂತಿಮ ನಿಲ್ದಾಣವನ್ನ ಬದಲಾವಣೆ ಮಾಡಿಕೊಂಡಿರುವ ಈ ವಿಮಾನ ನ್ಯೂಯಾರ್ಕ್ನ ಜೆಎಫ್ಕೆ ಏರ್ಪೋರ್ಟ್ವರೆಗೆ ಸಾಗಲಿದೆ. ಇದರಿಂದಾಗಿ ವಿಮಾನ ಹಾರಾಟದ ಒಟ್ಟು ಅವಧಿ ಹಾಗೂ ದೂರ ಹೆಚ್ಚಾಗಲಿದೆ.
ಕರೊನಾ ವೈರಸ್ನಿಂದಾಗಿ ಮಾರ್ಚ್ 23ಕ್ಕೆ ಈ ವಿಮಾನ ತನ್ನ ಹಾರಾಟವನ್ನ ನಿಲ್ಲಿಸಿತ್ತು. ಈ ಹಿಂದೆ 18 ತಾಸುಗಳಲ್ಲಿ 15343 ಕಿಲೋಮೀಟರ್ ಹಾರುತ್ತಿದ್ದ ವಿಮಾನ ಇನ್ಮೇಲೆ 15347 ಕಿಲೋಮೀಟರ್ ದೂರ ಕ್ರಮಿಸಲಿದೆ.
ಸಿಂಗಾಪುರ ವಿಮಾನ ನಿಲ್ದಾಣದಿಂದ ಜೆಎಫ್ಕೆಗೆ ಬರಲು 18 ತಾಸು 5 ನಿಮಿಷಗಳ ಸಮಯ ಬೇಕಾದ್ರೆ ಜೆಎಫ್ಕೆ ನಿಲ್ದಾಣದಿಂದ ಸಿಂಗಾಪುರಕ್ಕೆ ತೆರಳಲು 18 ತಾಸು 40 ನಿಮಿಷ ಅವಧಿ ಬೇಕಾಗುತ್ತೆ. ನವೆಂಬರ್ 9ರಿಂದ ಈ ವಿಮಾನ ಹಾರಾಟ ನಡೆಸಲಿದ್ದು ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರ ಆಸನಕ್ಕೆ ವ್ಯವಸ್ಥೆ ನೀಡಬೇಕು ಅನ್ನೋದ್ರ ಬಗ್ಗೆ ಚರ್ಚೆ ಮುಂದುವರಿದಿದೆ.