ಅದೊಂದು ಕಾಲವಿತ್ತು. ನಿಕಾನ್ ಹಾಗೂ ಫ್ಯೂಜಿ ಫಿಲಂಗಳಂಥ ಪ್ರತಿಷ್ಠಿತ ಫೊಟೋಗ್ರಾಫಿ ಕಂಪನಿಗಳು ತಂತಮ್ಮ ಕ್ಯಾಮೆರಾಗಳಲ್ಲಿ 10-12 ಮೆಗಾಪಿಕ್ಸೆಲ್‌ಗಳ ರೆಸಲ್ಯೂಷನ್ ಕೊಡುತ್ತಿದ್ದವು. ಈ ಮಟ್ಟದ ಸ್ಪಷ್ಟತೆಯೇ ದೊಡ್ಡದಿತ್ತು.
ಆದರೆ ದಶಕಗಳು ಉರುಳಿದಂತೆ ಇಮೇಜಿಂಗ್ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಈಗ ಮೆಗಾಪಿಕ್ಸೆಲ್‌ಗಳಿಗೆ ಲೆಕ್ಕವೇ ಇಲ್ಲ ಎಂಬಂತಾಗಿದೆ. ಅಮೆರಿಕದ ನ್ಯಾಷನಲ್ ಆಕ್ಸಿಲರೇಟರ್ ಪ್ರಯೋಗಾಲಯದ ವಿಜ್ಞಾನಿಗಳು 3,200 ಮೆಗಾಪಿಕ್ಸೆಲ್ ರೆಸಲ್ಯೂಷನ್‌ನಲ್ಲಿ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ…! ಹೌದು, 3,200 ಮೆಗಾಪಿಕ್ಸೆಲ್…! ಈ ಸಾಧನೆಯನ್ನು ಮಾಡಲು ಜಗತ್ತಿನ ಅತಿ ದೊಡ್ಡ ಕ್ಯಾಮೆರಾದ ಸೆನ್ಸರ್ ಅನ್ನು ಬಳಸಲಾಗಿದೆಯಂತೆ.
ಮೆಗಾಪಿಕ್ಸೆಲ್ ಕಾಲ ಹೋಗಿ ಇದೀಗ ಗಿಗಾಪಿಕ್ಸೆಲ್‌ನಲ್ಲಿ ರೆಸಲ್ಯೂಷನ್ ಅಳೆಯಲು ಮುನ್ನುಡಿ ಬರೆದಿರುವ ಈ ಕ್ಯಾಮೆರಾದಲ್ಲಿ ಮೊದಲು ಬ್ರೊಕಿಲಿ ಸೊಪ್ಪಿನ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಈ ಕ್ಯಾಮೆರಾವನ್ನು ಚಿಲಿಯಲ್ಲಿರುವ Legacy Survey of Space and Time (LSST) ಟೆಲಿಸ್ಕೋಪ್‌ನಲ್ಲಿ ಬಳಸಲಾಗುವುದು. ಈ ಮೂಲಕ ಕಪ್ಪು ರಂಧ್ರಗಳು ಹಾಗೂ ವಿಶ್ವದ ಬಹುದೂರದ ವಸ್ತುಗಳ ಕುರಿತು ಅಧ್ಯಯನ ಮಾಡಲಾಗುವುದು.