ಕೋವಿಡ್-19 ಕಾರಣದಿಂದ ತಿಂಗಳುಗಟ್ಟಲೇ ಅವಧಿಗೆ ಲಾಕ್‌ಡೌನ್ ಆಗಿ ಕುಡಿಯಲು ಎಣ್ಣೆ ಸಿಗದೇ ದಾಹಗೊಂಡಿರುವ ಇಂಗ್ಲೆಂಡ್‌ನ ಮದ್ಯಪ್ರಿಯರು ಪಬ್ ಮತ್ತು ಬಾರುಗಳು ತೆರೆಯಲು ಕಾಯುತ್ತಿದ್ದಾರೆ.
ಹಂತಹಂತವಾಗಿ ಪಬ್‌ಗಳು ಹಾಗೂ ಬಾರುಗಳು ತೆರೆಯುತ್ತಿರುವ ಸಂದರ್ಭದಲ್ಲಿ ಈ ಸ್ಥಳಗಳಿಗೆ ಭೇಟಿ ಕೊಡಲು ಮದ್ಯಪ್ರಿಯರು ಸೀಟ್ ಬುಕಿಂಗ್ ಮಾಡಲು ಹಾತೊರೆಯುತ್ತಿದ್ದಾರೆ. ಮಧ್ಯರಾತ್ರಿಯ ಬಳಿಕವೂ ಬಾರುಗಳ ಮುಂದೆ ಸಾಲುಗಟ್ಟಿ ನಿಂತಿರುವ ಜನರ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿವೆ.
ಕಣ್ಣಾಲಿಗಳನ್ನು ತೇವಗೊಳಿಸುತ್ತೆ ಪತ್ನಿ ಮೇಲಿನ ವೃದ್ದ ವ್ಯಕ್ತಿಯ ನಿಷ್ಕಲ್ಮಶ ಪ್ರೀತಿ
ಟಿಕ್‌ಟಾಕರ್ ಒಬ್ಬರು ಮಾಡಿರುವ ವಿಡಿಯೋದಲ್ಲಿ; ಇನ್ನೂ ಬಾಗಿಲು ತೆರೆಯದ ಬಾರಿನ ಮುಂದೆ ಕಾಯುತ್ತಾ ಕುಳಿತ ಮಂದಿಯನ್ನು ನೋಡಬಹುದಾಗಿದೆ.
ಏಪ್ರಿಲ್ 12ರಿಂದ ಪಬ್ ಮತ್ತು ಬಿಯರ್ ಗಾರ್ಡನ್‌ಗಳನ್ನು ಮತ್ತೆ ತೆರೆಯಲು ಅಧಿಕೃತವಾಗಿ ಅನುಮತಿ ಕೊಡಲಾಗಿದ್ದು, ಕೋವಿಡ್-ಸೇಫ್ ವ್ಯವಸ್ಥೆ ಮಾಡಿಕೊಂಡರಷ್ಟೇ ವ್ಯಾಪಾರ ಮಾಡಲು ಅನುಮತಿ ಕೊಡಲಾಗುವುದು.
ಬಾರ್‌ಗಳಲ್ಲದೇ ಜಿಮ್, ಹೇರ್‌ಸಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳನ್ನು ಸಹ ಮತ್ತೆ ತೆರೆಯಲು ಬ್ರಿಟನ್‌ನಲ್ಲಿ ಅನುಮತಿ ಕೊಡಲಾಗಿದೆ.