alex Certify PPE ಸೂಟ್‌ ನಲ್ಲೇ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ ನರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PPE ಸೂಟ್‌ ನಲ್ಲೇ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಿದ ನರ್ಸ್

ಇಟಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ತಮ್ಮ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್ ಮಾಡಲು ಟೈಂ ಸೇವಿಂಗ್ ಹಾಗೂ ಬಹಳ ಅರ್ಥಪೂರ್ಣವಾದ ಮಾರ್ಗವೊಂದನ್ನು ಆರಿಸಿಕೊಂಡಿದ್ದಾರೆ.

ಇಲ್ಲಿನ ಪ್ಯುಜಿಲಾ ಎಂಬ ಊರಿನಲ್ಲಿರುವ ಆಸ್ಟುನಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಜೆಸುಪ್ಪೆ ಪಂಜೆಂಟೆ ಕಳೆದ ಹತ್ತು ತಿಂಗಳುಗಳಿಂದ ಕೋವಿಡ್-19 ಸೋಂಕಿತರ ಶುಶ್ರೂಷೆಯಲ್ಲಿ ಬ್ಯುಸಿ ಆಗಿದ್ದಾರೆ. ಇದೇ ವೇಳೆ ತಮ್ಮ ಗರ್ಲ್‌ಫ್ರೆಂಡ್‌ ಕಾರ್ಮೆಲಿಗೆ ಪ್ರಪೋಸ್ ಮಾಡಲು ರೊಮ್ಯಾಂಟಿಕ್ ಡೇಟ್‌ ಒಂದರ ಮೇಲೆ ಹೋಗಲು ಸಮಯವೇ ಇಲ್ಲದಂತಾಗಿದೆ.

ಹೀಗಾಗಿ ಪಿಪಿಇ ಸೂಟ್‌ಧಾರಿಯಾಗಿದ್ದುಕೊಂಡೇ ತಮ್ಮ ಬೆನ್ನ ಮೇಲೆ, “ಕಾರ್ಮೆಲಿ, ನನ್ನನ್ನು ಮದುವೆಯಾಗುವೆಯಾ?” ಎಂದು ಬರೆದು, ಅದರ ಕೆಳಗೆ, ’ಎಸ್‌’ ಅಥವಾ ’ನೋ’ ಎಂದು ಇಟಲಿಯನ್ ಭಾಷೆಯಲ್ಲಿ ಬರೆದಿದ್ದಾರೆ.

ತನ್ನ ಈ ಪ್ರೇಮ ನಿವೇದನೆಯ ಚಿತ್ರವನ್ನು ಪಂಜೆಂಟೆ ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಅಂದಹಾಗೆ ಈ ಪ್ರೇಮನಿವೇದನೆಯ ಸ್ಟೋರಿಗೆ ’ಪಾಸಿಟಿವ್’ ಕ್ಲೈಮ್ಯಾಕ್ಸ್ ಸಿಕ್ಕಿದೆ.

https://www.facebook.com/6000sardine/posts/411488660300238

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...