ಅಮೆರಿಕದ ಗಿಲ್ಯಾಡ್ ಸೈನ್ಸಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ರೆಮ್‌ಡಿಸಿವರ್ ನಿಂದ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಕಡಿಮೆಯಾಗ್ತಿದೆಯಂತೆ. ಶೇಕಡಾ 62ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗ್ತಿದೆ ಎಂದು ಗಿಲ್ಯಾಡ್ ಸೈನ್ಸಸ್ ಇಂಕ್ ಹೇಳಿದೆ.
ರೆಮಿಡಿಸೈವರ್ ಸಾವಿನ ಪ್ರಮಾಣವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿದೆ. ಔಷಧಿ ಗಂಭೀರ ರೋಗಿಗಳ ಸ್ಥಿತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಡೆಸಿದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಇದಾದ ನಂತ್ರ ಔಷಧಿಗೆ ಬೇಡಿಕೆ ಹೆಚ್ಚಾಗಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ರೆಮೆಡಿಸೈವರ್ ಪ್ರಸ್ತುತ ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ.
ಗಿಲ್ಯಾಡ್ ತನ್ನ ಅಧ್ಯಯನದಲ್ಲಿ 312 ರೋಗಿಗಳ ಡೇಟಾವನ್ನು ವಿಶ್ಲೇಷಿಸಿದೆ. ಸಾಮಾನ್ಯ ಔಷಧಿಗಳನ್ನು ತೆಗೆದುಕೊಂಡ ಶೇಕಡಾ 12.5 ರಷ್ಟು ಮಂದಿ ಸಾವನ್ನಪ್ಪಿದ್ದರೆ, ರೆಮೆಡಿಸಿವರ್ ಬಳಸಿದ ಶೇಕಡಾ 7.6ರಷ್ಟು ರೋಗಿಗಳು ಸಾವನ್ನಪ್ಪಿದರು.