
ಬಾಲಿವುಡ್ ನಟ ದಿವಂಗತ ರಿಷಿ ಕಪೂರ್ ಅವರ ಪೂರ್ವಜರ ಮನೆ ಕಪೂರ್ ಹವೇಲಿ ನೆಲಸಮವಾಗುವ ಭೀತಿಗೆ ಸಿಲುಕಿದೆ.
ಪಾಕಿಸ್ತಾನದ ಪೇಶಾವರದಲ್ಲಿ ಅವರ ಪೂರ್ವಜರ ಮನೆ ಇದ್ದು, ಈ ಹಿಂದೆ ಪಾಕಿಸ್ತಾನ ಸರ್ಕಾರ, ನಟನ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಮನೆಯ ಮಾಲೀಕರು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ.
ಪ್ರಸ್ತುತ ಈ ಮನೆಯ ಜಾಗವನ್ನು ಆಭರಣ ವ್ಯಾಪಾರಿ ಹಾಜಿ ಮೊಹ್ಮದ್ ಎಂಬುವರ ಮಾಲೀಕತ್ವದಲ್ಲಿದೆ. ಶಿಥಿಲಾವಸ್ಥೆಯಿಂದಾಗಿ ಕಟ್ಟಡ ಯಾವಾಗ ಬೇಕಾದರೂ ಕುಸಿಯಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳೀಯ ಸರ್ಕಾರವು ಮನೆಯನ್ನು ಅದರ ಐತಿಹಾಸಿಕ ಮಹತ್ವ ಗಮನದಲ್ಲಿರಿಸಿಕೊಂಡು ಮೂಲ ರೂಪದಲ್ಲಿ ಸಂರಕ್ಷಿಸಲು ಬಯಸಿತ್ತು. ಆದರೆ ಅದನ್ನು ನೆಲಸಮಗೊಳಿಸಿ ಹೊಸ ವಾಣಿಜ್ಯ ಕಟ್ಟಡ ನಿರ್ಮಿಸಲು ಮಾಲೀಕರು ಬಯಸಿದ್ದಾರೆ.
ಈ ಹಿಂದೆ ಎರಡು ಬಾರಿ ಕಟ್ಟಡವನ್ನು ನೆಲಸಮ ಮಾಡಲು ಮುಂದಾದಾಗ ಅಲ್ಲಿನ ಪಾರಂಪರಿಕ ಇಲಾಖೆಯು ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಪ್ರಾಂತೀಯ ಸರ್ಕಾರವು ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ವಿಫಲವಾಗಿದೆ.