ವಿಶ್ವದ ಪ್ರಸಿದ್ಧ ಶೂ ಬ್ರ್ಯಾಂಡ್ ‘ನೈಕ್’ ಈಗ ಹ್ಯಾಂಡ್ ಫ್ರೀ ಶೂಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಕಾರ್ಯದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಕಂಪನಿ ಈ ಶೂ ಸಿದ್ಧ ಮಾಡುವ ಹಿಂದೆ ಹೃದಯಸ್ಪರ್ಶಿ ಕಥೆಯೇ ಇದೆ.
ಹೌದು, ಸೆರೆಬ್ರಲ್ ಫಾಲ್ಸಿ ಎಂಬ ಕಾಯಂ ಅಂಗವೈಕಲ್ಯಕ್ಕೆ ಒಳಗಾಗಿದ್ದ ಮ್ಯಾಥ್ಯೂ ವಾಲ್ಝರ್ ಎಂಬ 16 ವರ್ಷದ ಬಾಲಕ ಕಂಪನಿಗೆ ಪತ್ರ ಬರೆದಿದ್ದ. ಆತ ಸಾಮಾನ್ಯ ಗರ್ಭದ ಅವಧಿಗಿಂತ ಮುಂಚೆ ಹುಟ್ಟಿದವ. ಇದರಿಂದ ಎಲುಬುಗಳ, ಬೆನ್ನು ಮೂಳೆಯ ಬೆಳವಣಿಗೆ ಆಗಿರಲಿಲ್ಲ. ಹಾಗಾಗಿ ಆತ ಬಗ್ಗಲು ಸಾಧ್ಯವಾಗುತ್ತಿರಲಿಲ್ಲ. ತನ್ನ ಕೆಲಸ ತಾನು ಮಾಡಿಕೊಳ್ಳಲು ಆತನಿಗೆ ಬೇರೆಯವರ ಸಹಕಾರ ಬೇಕಿತ್ತು.
ಉಲ್ಕಾ ಶಿಲೆ ಅಪ್ಪಳಿಸಿದ ಸುದ್ದಿ ಬೆನ್ನತ್ತಿದ ವೇಳೆ ಬಯಲಾಗಿದ್ದೇ ಬೇರೆ….!
“ನಾನು ಸ್ವತಂತ್ರವಾಗಿ ನನ್ನ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಲು ಇಚ್ಛೆಪಡುತ್ತೇನೆ. ಮಾಡುತ್ತೇನೆ ಕೂಡ. ಆದರೆ, ನನ್ನ ಶೂ ಲೇಸ್ ಗಳನ್ನು ಕಟ್ಟಿಕೊಳ್ಳಲು ಮಾತ್ರ ಬೇರೆಯವರ ಸಹಾಯ ಬೇಕಿದೆ. ಇದರಿಂದ ಲೇಸ್ ಇಲ್ಲದ ಹ್ಯಾಂಡ್ ಫ್ರೀ ಶೂ ಮಾಡಿ” ಎಂದು 2012 ರಲ್ಲಿ ಮನವಿ ಮಾಡಿದ್ದ. ಅದನ್ನು ಇಟ್ಟುಕೊಂಡು ಕಂಪನಿ ಹ್ಯಾಂಡ್ ಫ್ರೀ ಶೂ ಸಿದ್ಧ ಮಾಡಿ, ಬಿಡುಗಡೆ ಮಾಡಿದೆ.
https://twitter.com/GoodNewsCorres1/status/1356455146373414915?ref_src=twsrc%5Etfw%7Ctwcamp%5Etweetembed%7Ctwterm%5E1356455146373414915%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fthe-heartwarming-story-behind-nikes-first-hands-free-shoe-2361922