ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ವಸ್ತು ಎಂದರೆ ಅದು ಮುಖದ ಮಾಸ್ಕ್. ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯಿಂದ ಹೊರಹೋಗುವ ಮುನ್ನ ತಪ್ಪದೇ ಮಾಸ್ಕ್ ಧರಿಸುವಂತೆ ಮಾಡಿಬಿಟ್ಟಿದೆ ಕೋವಿಡ್-19 ವೈರಸ್.
ಈ ಮಾಸ್ಕ್‌ಗಳಲ್ಲೂ ಸಾಕಷ್ಟು ಸ್ಟೈಲಿಶ್ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಇದೀಗ ಬಾಯಿಯ ಚಲನೆಯೊಂದಿಗೆ ಚಲಿಸಬಲ್ಲ ಎಲ್‌ಇಡಿ ಲೈಟ್ ಗಳನ್ನು ಹೊಂದಿರುವ, ವಾಯ್ಸ್ ಕಂಟ್ರೋಲ್ ಮಾಡಬಲ್ಲ ಮಾಸ್ಕ್ ಒಂದು ಆವಿಷ್ಕಾರಗೊಂಡಿದ್ದು, ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.
ಮಾಸ್ಕ್ ಧರಿಸಿರುವ ವ್ಯಕ್ತಿ ಮಾತನಾಡುತ್ತಿದ್ದಾರೆ ಎಂದು ಇತರರಿಗೆ ತಿಳಿಯುವಂತೆ ಮಾಡಲು ಈ ಎಲ್‌ಇಡಿ ಲೈಟ್ ಗಳ ಚಲನೆಯ ಕಾನ್ಸೆಪ್ಟ್ ತರಲಾಗಿದೆ. ಇದನ್ನು ಮೂಲತಃ ಗೇಮ್ ಡಿಸೈನರ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಆಗಿರುವ ಟೈಲರ್ ಗ್ಯಾಬ್ರಿಯಲ್ ಎಂಬುವವರು ಅಭಿವೃದ್ಧಿ ಪಡಿಸಿದ್ದಾರೆ.