ಗರ್ಭಿಣಿ ಆದ ವಿಚಾರವನ್ನ ಘೋಷಣೆ ಮಾಡೋಕೆ ಈಗೀಗ ದಂಪತಿ ಹೊಸ ಹೊಸ ಮಾರ್ಗವನ್ನ ಹುಡುಕ್ತಾನೇ ಇರ್ತಾರೆ.
ಅದರಲ್ಲೂ ಪತ್ನಿಯಂದಿರು ತಮ್ಮ ಪತಿಗೆ ಗುಡ್ ನ್ಯೂಸ್ ನೀಡುವಾಗ ವಿಶೇಷವಾಗಿ ಪ್ಲಾನ್ ಮಾಡ್ತಾರೆ. ಟಿಕ್ಟಾಕ್ನಲ್ಲಿ ವೈರಲ್ ಆದ ಇಂತಹದ್ದೇ ಒಂದು ವಿಡಿಯೋದಲ್ಲಿ ಪತ್ನಿ ತಾನು ಗರ್ಭಿಣಿಯಾಗಿರುವ ವಿಚಾರವನ್ನ ಲಾಟರಿ ಕಾರ್ಡ್ಗಳನ್ನ ಬಳಕೆ ಮಾಡಿ ಹೇಳಿದ್ದಾರೆ.
ಸಾಮಾನ್ಯವಾಗಿ ಲಾಟರಿ ಕಾರ್ಡ್ಗಳು ನಮ್ಮ ಅದೃಷ್ಟವನ್ನ ಪರೀಕ್ಷೆ ಮಾಡುತ್ತವೆ. ಆದರೆ ಇಲ್ಲಿ ಈ ಪತ್ನಿ ತಮ್ಮ ಜೀವನದ ಅತ್ಯಂತ ದೊಡ್ಡ ಸುದ್ದಿಯನ್ನ ಪತಿಗೆ ಹೇಳೋಕೆ ಲಾಟರಿ ಕಾರ್ಡ್ಗಳನ್ನ ಬಳಕೆ ಮಾಡಿಕೊಂಡಿದ್ದಾರೆ.
ಪತ್ನಿ ನೀಡಿದ ಕಾರ್ಡ್ನ್ನು ಸ್ಕ್ರಾಚ್ ಮಾಡಿದ ಪತಿಗೆ ತಾನು ತಂದೆಯಾಗುತ್ತಿರುವ ವಿಚಾರ ನೋಡಿ ಸಖತ್ ಖುಷ್ ಆಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಜಾಕ್ಪಾಟ್ನ್ನೇ ಹೊಡೆದಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ.