ವಾಷಿಂಗ್ಟನ್: ಗೂಗಲ್ ಕಂಪನಿಗೆ ಸೇರಿದ ವಿಡಿಯೋ ಶೇರಿಂಗ್ ವೆಬ್‌ಸೈಟ್ ಯು ಟ್ಯೂಬ್ ಇಂದು ಜನರ ಎಲ್ಲ ಅವಶ್ಯಕತೆಗಳಿಗೆ ಜತೆಯಾಗಿದೆ.
ಮನೆ ರಿಪೇರಿ, ಗಣಿತ ಸಮಸ್ಯೆಯಿಂದ ಹಿಡಿದು ಹೊಟ್ಟೆನೋವಿನ ಔಷಧಿಯವರೆಗೆ ಎಲ್ಲವೂ ಯು ಟ್ಯೂಬ್‌ನಲ್ಲಿ ಲಭ್ಯ. ಹಾಗಾದರೆ ಯು ಟ್ಯೂಬ್‌ನಲ್ಲಿ ಅತಿ ಹೆಚ್ಚು ನೋಡಿದ ವಿಡಿಯೋಗಳ್ಯಾವವು..? ಟಾಪ್ 7 ಮಾಹಿತಿ ಇಲ್ಲಿದೆ.
7) 2017 ರಲ್ಲಿ ಅಪ್‌ಲೋಡ್ ಮಾಡಲಾದ ಲುಲು ಕಿಡ್ಸ್ ವರ್ಷನ್‌ನ ಜಾನಿ ಜಾನಿ ಎಸ್ ಪಾಪಾ ವಿಡಿಯೋ 3.79 ಬಿಲಿಯನ್ ವೀಕ್ಷಣೆ ಪಡೆದಿದೆ.
6) 2014 ರಲ್ಲಿ ಅಪ್‌ಲೋಡ್ ಆದ ಅಮೇರಿಕನ್ ಸಿಂಗರ್ ಮಾರ್ಕ್ ರಾನ್ಸ್ನ್ ಅವರ ‘ಅಪ್‌ಟೌನ್ ಫಂಕ್’ ಎಂಬ ಹಾಡು 3.93 ಬಿಲಿಯನ್ ವೀಕ್ಷಣೆ ಪಡೆದಿದೆ.
5) ರಷ್ಯನ್ ಮಕ್ಕಳ ಟಿವಿ ಸಿರೀಸ್ ಮಾಷಾ ಆಡ್ ದ ಬೇರ್ 4.32 ಬಿಲಿಯನ್ ವೀಕ್ಷಣೆ ಪಡೆದಿದೆ. ವಿಶೇಷ ಎಂದರೆ 3.9 ಬಿಲಿಯನ್ ಜನ ಇದನ್ನು ಡಿಸ್‌ಲೈಕ್ ಮಾಡಿದ್ದಾರೆ.
4) 2017 ರಲ್ಲಿ ಅಪ್‌ಲೋಡ್ ಆಗಿರುವ ‘ವಿಜ್ ಖಲೀಫಾ ಆಂಡ್ ಚಾರ್ಲಿ ಪತ್ಸ್’ ಹಾಡು ‘ಸಿ ಯು ಅಗೇನ್’ 4.71 ಬಿಲಿಯನ್ ವೀಕ್ಷಣೆ ಪಡೆದಿದೆ.
3) ಎಡ್ ಶಿರನ್ಸ್ ಅವರ 2017 ರಲ್ಲಿ ಅಪ್‌ಲೋಡ್ ಆದ ‘ಶೇಪ್ ಆಫ್ ಯು’ ಎಂಬ ಹಾಡು 4.96 ಬಿಲಿಯನ್ ವೀಕ್ಷಣೆ ಪಡೆದಿದೆ.
2) 6.44 ಬಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಸೌತ್ ಕೊರಿಯಾದ ಪಿಂಕ್‌ಫಾಂಗ್ ಕಂಪನಿಯ ಬೇಬಿ ಶ್ರಂಕ್ ಡಾನ್ಸ್ ಯು ಟ್ಯೂಬ್‌ನಲ್ಲಿ ಎರಡನೇ ಅತಿ ಹೆಚ್ಚು ನೋಡಿದ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1) ಪ್ಯುರ‍್ಟೋರಿಕನ್ ಹಾಡುಗಾರ ಲ್ಯೂಸಿ ಫೋನ್ಸಿ ಹಾಡಿದ ಡೆಡ್ಡಿ ಯಾಂಕಿ ರ‍್ಯಾಪರ್ ಲ್ಯೂಸಿ ಫೋನ್ಸಿ ಅವರನ್ನು ಒಳಗೊಂಡ ಮ್ಯೂಸಿಕ್ ವಿಡಿಯೋ ‘ಡಿಸ್ಪೆಕ್ಟಿಯೋ ಡಿಸ್ಪೆಕ್ಟಿಯೋ’ 6.95 ಬಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಯು ಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಎಂಬ ಸಾರ್ವಕಾಲಿಕ ದಾಖಲೆ ಬರೆದಿದೆ. 2017 ರಲ್ಲಿ ವಿಡಿಯೋ ಅಪ್‌ಲೋಡ್ ಆಗಿದೆ.