
ಕೆಲವೊಂದು ಮರಗಳನ್ನು ಕಡಿಯುವುದು ಒಂದು ರೀತಿಯ ಸಾಹಸ ಕ್ರೀಡೆ ಇದ್ದಂತೆ. ಚೇನ್‌ಸಾ ಬಳಸಿಕೊಂಡು ಖರ್ಜೂರದ ಮರ ಕಡಿಯುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ.
ಬಹಳ ಉದ್ದವಾದ ಮರವನ್ನು ಕಡಿಯುವ ವೇಳೆ ಆ ವ್ಯಕ್ತಿ ತೂರಾಡುತ್ತಿರುವ ಮರದಲ್ಲಿ ಸಿಲುಕಿಕೊಂಡಿರುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಇದನ್ನು ಕಂಡವರು ಮೊದಲಿಗೆ ಆತ ಮರದ ನೇತಾಡುವಿಕೆಯೊಂದಿಗೆ ಹಾರಿ ಹೋಗಬಹುದು ಎಂದು ಭಾವಿಸಿದ್ದರು.
ಆದರೆ, ಒಂದು ಕೈಯಲ್ಲಿ ಗರಗಸ ಹಿಡಿದುಕೊಂದು ಮರದ ಮೇಲ್ಭಾಗ ಕತ್ತರಿಸಿದ ಆತ ಮರದ ಇನ್ನುಳಿದ ಕಾಂಡದ ತುದಿಯಲ್ಲಿ ಬಿಗಿಯಾಗಿ ನೇತುಹಾಕಿಕೊಂಡು ಇರಲು ಸಫಲರಾಗಿದ್ದಾರೆ. ಆತ ಮರವನ್ನೇರಿ ಕುಳಿತಿದ್ದಾಗಲೇ ಬಹಳ ಬೆಂಡ್ ಆಗಿದ್ದ ಮರ, ಕಾಂಡದ ಮೇಲ್ಭಾಗ ಕತ್ತರಿಸುತ್ತಲೇ ಸಿಕ್ಕಾಪಟ್ಟೆ ಅಲುಗಾಡಿದರೂ ಸಹ ಆತನ ತನ್ನ ಬ್ಯಾಲೆನ್ಸ್ ಕಳೆದುಕೊಳ್ಳದೇ ಅಲ್ಲೇ ಕುಳಿತದ್ದು ಒಂದು ದೊಡ್ಡ ಸಾಹಸವೇ ಸರಿ. ನೋಡಿದರೆ ಮೈರೋಮಾಂಚನಗೊಳ್ಳುವ 34 ಸೆಕೆಂಡ್‌ಗಳ ಈ ವಿಡಿಯೋಗೆ 42 ಲಕ್ಷ ವೀವ್ಸ್‌ಗಳು ಸಂದಿವೆ.