ದಕ್ಷಿಣ ಆಫ್ರಿಕಾದ ಕೇಪ್ಟೌನ್ ಬಳಿಯ ಫಿಶ್ ಹೋಕ್ ಸಮುದ್ರದಲ್ಲಿ ಬ್ಲೂ ಡ್ರ್ಯಾಗನ್ಸ್ ಆಫ್ ಗ್ಲಾಕಸ್ ಅಂಟಾರ್ಟಿಕಾ ಎಂದು ಕರೆಯಲ್ಪಡುವ 20 ಡ್ರ್ಯಾಗನ್ ರೀತಿಯ ನೀಲಿ ಬಣ್ಣದ ಸಮುದ್ರ ಜೀವಿಗಳನ್ನ ದಾರಿಹೋಕರು ಗುರುತಿಸಿದ್ದಾರೆ.
ಅತ್ಯಂತ ಸುಂದರವಾಗಿರುವ ಈ ಸಮುದ್ರ ಜೀವಿಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಂತೆಯೇ ನೆಟ್ಟಿಗರು ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್ಸ್ ನೀಡಿದ್ದಾರೆ.
ಈ ಪ್ರಾಣಿಗಳನ್ನ ಸಮುದ್ರ ಲೋಕದ ಸುಂದರ ಕೊಲೆಗಾರರು ಎಂದೂ ಕರೆಯಲಾಗುತ್ತೆ. ಇವು ನೋಡೋಕೆ ಮಿನಿ ಡ್ರ್ಯಾಗನ್ಗಳಂತೇ ಇದ್ದರೂ ಸಹ ಪಕ್ಷಿ, ಹಲ್ಲಿ ಹಾಗೂ ಆಕ್ಟೋಪಸ್ನ ವೈಶಿಷ್ಟ್ಯ ಹೊಂದಿದೆ.