alex Certify ಚೀಸ್​ ಫೋಟೋ ಶೇರ್​ ಮಾಡಿ ಜೈಲುಪಾಲಾದ ಡ್ರಗ್​ ಡೀಲರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀಸ್​ ಫೋಟೋ ಶೇರ್​ ಮಾಡಿ ಜೈಲುಪಾಲಾದ ಡ್ರಗ್​ ಡೀಲರ್​..!

ಸಾಮಾಜಿಕ ಜಾಲತಾಣದಲ್ಲಿ ಚೀಸ್​​ ಪ್ಯಾಕೆಟ್​ನ ಫೋಟೊವನ್ನ ಹಾಕಿದ ವ್ಯಕ್ತಿಯೊಬ್ಬ ಇದೀಗ ಬರೋಬ್ಬರಿ 13 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ..! ಅರೆ, ಚೀಸ್​ಗೂ ಜೈಲು ಶಿಕ್ಷೆಗೂ ಇದೇನು ಸಂಬಂಧ ಅಂದರಾ..? ಟ್ವಿಸ್ಟ್​ ಇಲ್ಲಿದೆ.

ಕಾರ್ಲ್​ ಸ್ಟೆವಾರ್ಟ್​ ಎಂಬ ಡ್ರಗ್​ ಡೀಲರ್​ ಕೆಲ ದಿನಗಳ ಹಿಂದಷ್ಟೇ ಆನ್​​ಲೈನ್​ನಲ್ಲಿ ಎಂ & ಎಸ್​ ಸ್ಟಿಲಿಟೋನ್​ ಚೀಸ್​ನ ಫೋಟೋವನ್ನ ಶೇರ್​ ಮಾಡಿದ್ದ. ಆದರೆ ವರದಿಗಳ ಪ್ರಕಾರ ಸ್ಟಿವರ್ಟ್​ ಎನ್​ಕ್ರಿಪ್ಟ್ ಮಾಡಲಾದ ನೆಟ್​ವರ್ಕ್​ನ ಮೂಲಕ ಇದನ್ನ ಹಂಚಿಕೊಂಡಿದ್ದಾರೆ. ಇದನ್ನ ಅಕ್ರಮ ವಸ್ತುಗಳನ್ನ ವ್ಯಾಪಾರ ಬಳಕೆ ಮಾಡಲು ಬಳಕೆ ಮಾಡಲಾಗುತ್ತದೆಯಂತೆ.

ವೆನೆಟಿಕ್​ ಎಂಬ ಕಾರ್ಯಾಚರಣೆಯ ಭಾಗವಾಗಿ ಯುರೋಪ್​ ಪೊಲೀಸರು ಈ ಅಕ್ರಮ ಡ್ರಗ್​ ಪ್ರಕರಣವನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟುವರ್ಟ್ ಶೇರ್ ಮಾಡಲಾದ ಫೋಟೋದಿಂದ ಅಧಿಕಾರಿಗಳು ಆತನ ಬೆರಳಚ್ಚನ್ನ ಪತ್ತೆ ಮಾಡಿ ಆತನನ್ನ ಬಂಧಿಸಿದ್ದಾರೆ.

ಚೀಸ್​ ಬ್ಲಾಕ್​ ಫೋಟೋವನ್ನ ಮರ್ಸಿಸೈಡ್​ ಪೊಲೀಸರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ. ಚೀಸ್​ ಬ್ಲಾಕ್​ನ ಎನ್ಕ್ರೋ ಸಾಧನವನ್ನ ಚಿತ್ರವನ್ನ ಆರೋಪಿ ಶೇರ್​ ಮಾಡಿದ್ದು ಇದರಲ್ಲಿ ಕಾಣುತ್ತಿದ್ದ ಆತನ ಬೆರಳಚ್ಚನ್ನ ಬಳಸಿಕೊಂಡು ಆರೋಪಿಯನ್ನ ಬಂಧಿಸಿದ್ದೇವೆ ಎಂದು ಶೀರ್ಷಿಕೆ ನೀಡಿದ್ದಾರೆ.

ಪೊಲೀಸರು ಬಂಧಿಸಿದ ಬಳಿಕ ಆತ ಕೊಕೇನ್​, ಹೆರಾಯಿನ್​ ಹಾಗೂ ಎಂಡಿಎಂಎ ಸರಬರಾಜು ಮಾಡಲು ಸಂಚು ರೂಪಿಸಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...