ಒಂದೇ ಮನೆಯಲ್ಲಿ ಸಹೋದರರಿದ್ದರೆ, ಒಬ್ಬರಿಗೆ ಕೊಟ್ಟು ಇನ್ನೊಬ್ಬರನ್ನು ಬಿಟ್ಟು ಏನನ್ನಾದರೂ ತಿಂದರೆ ಬೇಸರವಾಗುತ್ತದೆ.
ಇದು ಮನುಷ್ಯಮಾತ್ರರ ಭಾವನೆ, ಬೇಸರಗಳಲ್ಲ. ಮುಗ್ಧ ಪ್ರಾಣಿಗಳು ಮನುಷ್ಯರನ್ನ ಹಚ್ಚಿಕೊಳ್ಳುತ್ತವೆ. ಬಿಟ್ಟಿರಲಾಗದ ನಂಟೊಂದನ್ನು ಬೆಸೆದುಕೊಂಡಿರುತ್ತವೆ.
ನಾಯಿಯ ಮುಂದೆ ಅದರ ಮಾಲೀಕ ತಿಂಡಿ ತಿನ್ನುತ್ತಾ ಕುಳಿತಿರುತ್ತಾನೆ. ತನಗೂ ಸ್ವಲ್ಪ ಕೊಡಬಹುದೆಂದು ಕಾಯುತ್ತಾ ಕೂರುವ ನಾಯಿಯತ್ತ ಮಾಲೀಕ ತಿರುಗಿಯೂ ನೋಡುವುದಿಲ್ಲ. ತನ್ನ ಪಾಡಿಗೆ ತಾನು ತಿನ್ನುತ್ತಾ ಇರುತ್ತಾನೆ.
ಇದನ್ನು ಗಮನಿಸಿದ ಶ್ವಾನ ಅತ್ಯಂತ ಬೇಸರಗೊಂಡು ಅಳು ಮುಖ ಮಾಡಿಕೊಳ್ಳುತ್ತಿದೆ. ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ ಆಗಿದ್ದು, ನಾಯಿಯ ಭಾವನೆಗೆ ಹಲವರು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
https://www.instagram.com/p/CCTQCQkJCZz/?utm_source=ig_embed