ಬಾಂಗ್ಲಾದೇಶ ಮೂಲದ ಎಂಟು ವರ್ಷದ ಬಾಲಕನೊಬ್ಬ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದಾನೆ.
ಹೌದು, ಬಾಂಗ್ಲಾದೇಶದಲ್ಲಿ ಎಂಟು ವರ್ಷದ ಬಾಲಕ ಫರ್ಝಾದ್ ಕೊರೊನಾ ಸಮಯದಲ್ಲಿ ಅವರ ಶಿಕ್ಷಕರು ಯಾವ ರೀತಿ ಸಹಾಯ ಮಾಡಿದರು ಎನ್ನುವ ಕುರಿತು ವಿಡಿಯೊ ಮಾಡಿದ್ದಾನೆ. ಇದನ್ನು UNICEF ಶೇರ್ ಮಾಡಿದ್ದು, ಭಾರಿ ವೈರಲ್ ಆಗಿದೆ.
ವಿಡಿಯೊದಲ್ಲಿ ಬಾಲಕ, ಕೊರೊನಾ ಸಂಘರ್ಷದ ಸಮಯದಲ್ಲಿ ವಿವಿಧ ರೀತಿಯಲ್ಲಿ ಪಾಠ ಮಾಡಲು ಶಿಕ್ಷಕರು ಪ್ರಯತ್ನಿಸಿದರು. ಮಕ್ಕಳಿಗೆ ಧೈರ್ಯ ಹಾಗೂ ಸ್ಫೂರ್ತಿ ನೀಡುವ ಎಲ್ಲ ಕೆಲಸವನ್ನು ಮಾಡಿದ್ದಾರೆ. ಅಂತಿಮವಾಗಿ ಕಾರ್ಡ್ ಒಂದನ್ನು ಹಿಡಿದು ಶಿಕ್ಷಕರಿಗೆ ಧನ್ಯವಾದ ಹೇಳಿದ್ದಾನೆ. UNICEF ಹಾಕಿರುವ ಈ ವಿಡಿಯೊವನ್ನು 15 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.