ಕೊರೊನಾ ಹೆಚ್ಚಾಗ್ತಿದ್ದಂತೆ ವಿಶ್ವದಾದ್ಯಂತ ಲಾಕ್ ಡೌನ್ ಜಾರಿಯಲ್ಲಿತ್ತು. ಈಗ ಒಂದೊಂದೇ ದೇಶಗಳು ಲಾಕ್ ಡೌನ್ ತೆರವುಗೊಳಿಸಿವೆ. ಆದ್ರೆ ಕೊರೊನಾದಿಂದಾಗಿ ಮೊದಲಿದ್ದ ಜೀವನ ಶೈಲಿ ಮತ್ತೆ ಮರಳಿ ಬರುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ಥಾಯ್ಲೆಂಡ್ ನಲ್ಲಿ ಶುರುವಾದ ಶಾಲೆಯ ನಿಯಮಗಳು ಇದಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.
ಥಾಯ್ಲೆಂಡ್ ನಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ. ಆದ್ರೆ ಮಕ್ಕಳು ಕಠಿಣ ನಿಯಮಗಳನ್ನು ಪಾಲಿಸಬೇಕಾಗಿದೆ. ಶಾಲೆಯಲ್ಲಿ ಒಮ್ಮೆ ಒಂದು ತರಗತಿಗೆ 25 ಮಕ್ಕಳಿಗೆ ಮಾತ್ರ ಅನುಮತಿಯಿದೆ. ಆಗಾಗ ಶಾಲೆಗೆ ಸ್ಯಾನಿಟೈಜರ್ ಮಾಡಲಾಗುತ್ತದೆ. ಮಕ್ಕಳಿಗೆ ಮಾಸ್ಕ್ ಅನಿವಾರ್ಯವಾಗಿದೆ. ಮಕ್ಕಳು ಒಂದಾಗಿ ಆಟವಾಡಲು ಅವಕಾಶವಿಲ್ಲ.
ಪ್ರತಿಯೊಬ್ಬ ಮಗುವಿನ ಮೇಜಿನ ಮೇಲೆ ಪ್ಲಾಸ್ಟಿಕ್ ಕವರ್ ಹಾಕಲಾಗಿದೆ. ಆತ ಅದ್ರ ಹಿಂದೆ ಕುಳಿತು ಪಾಠ ಕೇಳಬೇಕು. ಮಕ್ಕಳ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಶಾಲೆ ಹೊರಗೆ ವಾಶ್ ಬೇಸಿನ್ ಇದ್ದು, ಶಾಲೆಗೆ ಬಂದ ಮೇಲೆ ಮತ್ತು ಹೊರಡುವ ವೇಳೆ ಕೈ ತೊಳೆಯುವುದು ಅನಿವಾರ್ಯವಾಗಿದೆ. ಇದ್ರಿಂದ ಕೊರೊನಾ ಹರಡುವ ಅಪಾಯ ಕಡಿಮೆ ಎನ್ನಲಾಗ್ತಿದೆ.