ಥಾಯ್ಲೆಂಡ್‌ನ ಸಾಯಿ ಬುರಿ ನದಿಯಲ್ಲಿನ ನೀರು ತಿಳಿಯಾಗುತ್ತಲೇ ಮರದ ಪ್ಯಾನ್ ಒಂದರಿಂದ ಮಣ್ಣನ್ನು ಎತ್ತಿ ನೋಡಿದ ಸುನಿಸಾ ಸ್ರಿಸುವಾನ್ನೋಗೆ ಫಳ ಫಳ ಹೊಳೆಯುವ ವಸ್ತುಗಳು ಗೋಚರಿಸಿವೆ.
ನೋಡ ನೋಡುತ್ತಲೇ $3.30 ಮೌಲ್ಯದ ಚಿನ್ನದ ಧೂಳು ಆ ಮಣ್ಣಿನಲ್ಲಿದೆ ಎಂದು ತಿಳಿದ ಕೂಡಲೇ ತನ್ನ ಸಂಗಾತಿ ಬೂನ್ಸಮ್ ಏಮ್‌ಪ್ರಾಸೆರ್ಟ್ ಜೊತೆಗೆ ಇನ್ನಷ್ಟು ಆಳವಾಗಿ ತೋಡಲು ಶುರು ಮಾಡಿದ್ದಾರೆ. ಇದೀಗ ಸುನಿಸಾ ಅವರ ಬಳಿ $100 ಮೌಲ್ಯದ ಚಿನ್ನದ ಸಂಗ್ರಹವಿದೆ.
ಕೋವಿಡ್-19 ಕಾರಣದಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿರುವ ಕಾರಣ ಸುನಿಸಾರಂತೆ ಅನೇಕ ಮಹಿಳೆಯರ ಕುಟುಂಬಗಳ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ. ಇದೇ ವೇಳೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಿರುವ ಕಾರಣದಿಂದ ಹೊಳೆಯಿಂದ ಚಿನ್ನ ಎತ್ತಿ ತೆಗೆಯುವ ಪರಿಪಾಠ ಇನ್ನಷ್ಟು ಜೋರಾಗಿದೆ. ಮಲೇಷ್ಯಾ ಥಾಯ್ಲೆಂಡ್ ಗಡಿಯಲ್ಲಿರುವ ಗೋಲ್ಡ್ ಮೌಂಟೆನ್ ಪ್ರದೇಶದಲ್ಲಿರುವ ಹೊಳೆಯಲ್ಲಿ ಈ ಗಣಿಗಾರಿಕೆ ಎಗ್ಗಿಲ್ಲದೇ ಸಾಗುತ್ತಿದೆ.