ಮೃತ ಜನರ ಬಟ್ಟೆಗಳನ್ನು ಮಾರಾಟ ಮಾಡಲೆಂದು ಖುದ್ದು ಝೊಂಬಿ ವೇಷಧಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಥಾಯ್ಲೆಂಡ್‌ನ ಆನ್ಲೈನ್ ರೀಟೇಲರ್ ಕನಿಇಟ್ಟಾ ಥೊಂಗ್ನಾಕ್ ತಮ್ಮ ಈ ನಡೆಯಿಂದ ಲಕ್ಷಾಂತರ ಜನರ ಗಮನ ಸೆಳೆದಿದ್ದಾರೆ.
ನೋಡುತ್ತಲೇ ಭೀತಿ ಮೂಡಿಸುವ ತನ್ನ ಈ ಅವತಾರದ ಚಿತ್ರಗಳ ಮೂಲಕ ಭಾರೀ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಪಡೆದುಕೊಂಡಿದ್ದಾರೆ ಕನಿಟ್ಟಾ. ಪ್ರತಿ ತಡರಾತ್ರಿಯಂದು ಈ ಅವತಾರಲ್ಲಿ ಕಾಣಿಸಿಕೊಳ್ಳಲು ಈಕೆ ಮೂರು ಗಂಟೆಗಳ ಕಾಲ ಮೇಕಪ್ ಮಾಡಿಕೊಳ್ಳುತ್ತಾರೆ.
ಹಾರರ್ ಚಿತ್ರಗಳು ಹಾಗೂ ಭೂತಗಳ ಜೊತೆಗೆ ದೆವ್ವಗಳ ಕುರಿತಂತೆ ಇರುವ ಸಾಮಾನ್ಯ ನಂಬಿಕೆಗಳ ಕಾರಣ ಥಾಯ್ ಜನರಲ್ಲಿ ಈ ಝೊಂಬಿ ಬಟ್ಟೆಗಳ ಮೇಲೆ ಕ್ರೇಜ್ ಇದೆ.