ಬ್ಯಾಂಕಾಕ್: ಥೈಲ್ಯಾಂಡ್ ರಾಜ ಪ್ರಭುತ್ವದ ವಿರುದ್ಧ ಮಾತನಾಡುವವರನ್ನು ಶಿಕ್ಷಿಸಲು ಇರುವ ಕಠಿಣ ಕಾನೂನು ರದ್ದು ಮಾಡುವಂತೆ ಆಗ್ರಹಿಸಿ ಕೆಲ ಪ್ರತಿಭಟನಾಕಾರರು ತಮ್ಮ ಮೇಲಂಗಿ(ಟಾಪ್) ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದರು.
ಬ್ಯಾಂಕಾಕ್ ನ ಸಿಮ್ ಪ್ಯಾರಾಗಾನ್ ಶಾಪಿಂಗ್ ಮಾಲ್ ನಲ್ಲಿರುವ ಥೈಲ್ಯಾಂಡ್ ರಾಜಕುಮಾರ ಸಿರಿವನ್ನವಾರಿ ಬುಟೀಕ್ ಎದುರು ತಮ್ಮ ಟಾಪ್ ಗಳನ್ನು ಹೊಟ್ಟೆ ತೋರಿಸುವಂತೆ ಹಾಕಿಕೊಂಡು ಹೊಟ್ಟೆಯ ಮೇಲೆ ಘೋಷಣೆ ಬರೆದು ಸೆಲ್ಯೂಟ್ ಮಾದರಿಯಲ್ಲಿ ಮೂರು ಬೆರಳುಗಳನ್ನು ಮೇಲೆತ್ತಿ ತೋರಿಸಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ರಾಜಪ್ರಭುತ್ವದ ವಿರುದ್ಧ ಮಾತನಾಡಿದ ಕನಿಷ್ಠ 35 ಜನರ ವಿರುದ್ಧ ಕಠಿಣ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ರಾಜ ನಪಾಸಿನ್ ತ್ರಿರಾಯಾಪಿವಾತ್ ವಿರುದ್ಧ ಪ್ರತಿಭಟನೆ ನಡೆದಿತ್ತು.