ಬೈರೂತ್: ಇಲ್ಲಿನ ಬಂದರಿನ ಗೋದಾಮಿನಲ್ಲಿ ಆದ ಸ್ಪೋಟಕ್ಕೆ ಭಾರಿ ಅನಾಹುತವಾಗಿದ್ದು, ಇಡೀ ಲೆಬನಾನ್ ದಿಗ್ಬ್ರಮೆಗೊಂಡಿದೆ. ಆ ಆಘಾತದಿಂದ ಇನ್ನೂ ಹೊರಬಂದಿಲ್ಲ. ಲೆಬನಾನ್ ರಾಜಧಾನಿ ಬೈರೂತ್ ನ ಬಂದರಿನಲ್ಲಿ ಸ್ಫೋಟ ಸಂಭವಿಸಿದ್ದು, ಸುಮಾರು 75 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಆದರೆ, ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಎಲ್ಲಿ..? ಏನಾಗುತ್ತಿದೆ..? ಎಂಬ ಅರಿವು ಇಲ್ಲದೆ ದಿಕ್ಕೆಟ್ಟು, ಕಂಗಾಲಾಗಿರುವ ನಾಗರಿಕರ ಒಂದೊಂದೇ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿವೆ.
ಸ್ಫೋಟ ಸಂಭವಿಸಿದ ಅದೆಷ್ಟೋ ದೂರ ಮನೆಗಳೆಲ್ಲ ಧ್ವಂಸಗೊಂಡಿವೆ. ಇನ್ನು ಬಹಳಷ್ಟು ಮನೆಗಳಿಗೆ ಹಾನಿಯಾಗಿವೆ. ಕೆಲವು ಕಟ್ಟಡಗಳ ಬುಡಗಳೇ ಅಲ್ಲಾಡಿವೆ. ಇನ್ನೂ ಇದರ ಹಾನಿ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.
ಸ್ಫೋಟದ ತೀವ್ರತೆಗೆ ಕಟ್ಟಡ ಅಲುಗಾಡಿದೆ. ಇದಕ್ಕೆ ಹೆದರಿದ ಮಗ ತನ್ನ ಅಪ್ಪನನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ. ಆಗ ಅಪ್ಪನಿಗೂ ಏನು ಮಾಡಬೇಕು ಎಂಬುದು ಕ್ಷಣ ಕಾಲ ತಿಳಿಯದೇ ಮಗನನ್ನು ಅತ್ತಿಂದಿತ್ತ ಹಾಲ್ ನಲ್ಲಿ ಎತ್ತಿಕೊಂಡು ತಿರುಗಿ ಕೊನೆಗೆ ಟೇಬಲ್ ಕೆಳಗೆ ಬಚ್ಚಿಡುತ್ತಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/santoshkr_08/status/1290796594930032645?ref_src=twsrc%5Etfw%7Ctwcamp%5Etweetembed%7Ctwterm%5E1290796594930032645%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fterrified-boy-clings-on-to-father-as-he-pushes-him-under-the-table-after-beirut-blast-2759735.html