ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ಕೇವಲ ದುಡ್ಡು ಮಾತ್ರವಲ್ಲದೆ ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದರಲ್ಲೂ ದೊಡ್ಡ ದೊಡ್ಡ ಟ್ಯೂಟೂ ಹಾಕಿಸಿಕೊಳ್ಳುವಾಗ ಹೆಚ್ಚೇ ನೋವಾಗುತ್ತದೆ.
ಆದರೆ ಈ ರೀತಿ ಇಷ್ಟಪಟ್ಟು ಹಾಕಿಸಿಕೊಂಡ ಟ್ಯಾಟೂ ಕೈಕೊಟ್ಟಾಗ ಆಗುವ ನೋವು ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಇದೇ ರೀತಿಯ ಬೇಸರ ಇದೀಗ ಯುವ ರ್ಯಾಪರ್ ಮೀಕ್ ಮಿಲ್ಗೆ ಆಗಿದೆ.
“Dream chaser” ಎಂದು ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳಲು ಆತ ಹೋಗಿದ್ದ. ಆದರೆ ಅದನ್ನು ಮಿರರ್ ಎಫೆಕ್ಟ್ನಲ್ಲಿ ಹಚ್ಚೆ ಹಾಕಿದ್ದಾನೆ. ಆರಂಭದಲ್ಲಿ ಈ ಎಡವಟ್ಟು ಮಿಕ್ಗೆ ಗೊತ್ತಾಗಲಿಲ್ಲ. ನಂತರ ಸ್ನೇಹಿತರೊಬ್ಬರು ಈ ಪ್ರಮಾದವನ್ನು ಹೇಳಿದ್ದಾರೆ.
ಟ್ಯಾಟೂ ಹಾಕಿದವನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಕೆಲವರು ಈತನ ಈ ಸಮಸ್ಯೆಗೆ ಮರುಗಿದ್ದಾರೆ.