
ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಜೋ ಬಿಡೆನ್ ಅವರು ಈ ಅದ್ಧೂರಿ ಸಮಾರಂಭಕ್ಕೆ ತಮ್ಮ ಒಬ್ಬ ವಿಶೇಷ ಸ್ನೇಹಿತನನ್ನು ಆಹ್ವಾನಿಸಿದ್ದಾರೆ.
ಮಾತನಾಡಲು ಪ್ರಯಾಸ ಪಡುವ ಹದಿಹರೆಯದ ಬ್ರೇಡನ್ ಹ್ಯಾರಿಂಗ್ಟನ್ ಈ ವಿಶೇಷ ಆಹ್ವಾನಿತ. ಈ ಹುಡುಗನ ಚಿತ್ರಕಥೆ ’ಬ್ರೇಡನ್ ಸ್ಪೀಕ್ಸ್ ಅಪ್’ ಮುಂದಿನ ಆಗಸ್ಟ್ 10ರಂದು ಬಿಡುಗಡೆಯಾಗಲಿದೆ ಎಂದು ಪ್ರಕಾಶಕ ಹಾರ್ಪರ್ ಕಾಲಿನ್ಸ್ ಘೋಷಿಸಿದೆ.
ಕಳೆದ ಫೆಬ್ರವರಿಯಲ್ಲಿ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿದ್ದ ವೇಳೆ 13 ವರ್ಷದ ಈ ಹುಡುಗನನ್ನು ಬಿಡೆನ್ ಮೊದಲ ಬಾರಿಗೆ ಭೇಟಿಯಾಗಿದ್ದರು.
ಈ ವೇಳೆ, ತನ್ನಲ್ಲಿ ಹೊಸ ಹುರುಪು ತುಂಬಿದ ಬಿಡೆನ್, ಬದುಕಿಗೆ ಹೊಸ ವಿಶ್ವಾಸ ತುಂಬಿದ್ದಾರೆ ಎಂದು ಕಳೆದ ಆಗಸ್ಟ್‌ನಲ್ಲಿ ಡೆಮಾಕ್ರಾಟಿಕ್ ಪಕ್ಷದ ಸಭೆಯೊಂದರಲ್ಲಿ ಮಾತನಾಡುವ ವೇಳೆ ಬ್ರೇಡನ್ ಹೇಳಿಕೊಂಡಿದ್ದ.