alex Certify ಬಾಲ್ಯ ವಿವಾಹದ ವಿರುದ್ಧ ಜಿಂಬಾಬ್ವೆ ಯುವತಿಯ ಸಮರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಯ ವಿವಾಹದ ವಿರುದ್ಧ ಜಿಂಬಾಬ್ವೆ ಯುವತಿಯ ಸಮರ

ಜಿಂಬಾಬ್ವೆಯ ಯುವತಿಯೊಬ್ಬಳು ಕುಟುಂಬದಿಂದ ಬಾಲ್ಯ ವಿವಾಹ ಒತ್ತಡವನ್ನ ಎದುರಿಸುತ್ತಿರುವ ಯುವತಿಯರಿಗೆ ಟೇಕ್ವಾಂಡೋ ತರಬೇತಿ ನೀಡುವ ಮೂಲಕ ಸುದ್ದಿಯಾಗಿದ್ದಾಳೆ.

ಆಫ್ರಿಕನ್​ ದೇಶದಲ್ಲಿ ಬಡತನದ ಕಾರಣದಿಂದಾಗಿ ಅನೇಕ ಹುಡುಗಿಯರಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ಮದುವೆ ಮಾಡಿಸಲಾಗ್ತಿದೆ. ಹೀಗಾಗಿ ಇಂತಹ ಅಪ್ರಾಪ್ತೆಯರಿಗೆ ಸ್ವಯಂ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ತರಬೇತಿಯನ್ನ ಆರಂಭಿಸಲಾಗಿದೆ.

ಮಾರಿಟ್ಸಾ 5ನೇ ವಯಸ್ಸಿನಿಂದಲೇ ಟೇಕ್ವಾಂಡೋ ಕಲೆಗಳನ್ನ ಅಭ್ಯಾಸ ಮಾಡುತ್ತಿದ್ದಾರೆ. ಕಿಕ್​, ಪಂಚ್​, ಸ್ಟ್ರೈಕ್​ ಸೇರಿದಂತೆ ಹಲವು ಆತ್ಮರಕ್ಷಣಾ ತಂತ್ರಗಳನ್ನ ಈ ತರಬೇತಿಯಲ್ಲಿ ಕಲಿಸಲಾಗುತ್ತಿದೆ.

ಮದುವೆ ಎಂಬ ವಿಚಾರಕ್ಕೆ ನಾವು ಸಿದ್ಧರಿಲ್ಲ. ಮದುವೆಯಾಗಲು ನಾವು ಇನ್ನೂ ಚಿಕ್ಕವರು. ಹೀಗಾಗಿ ನಮ್ಮ ಆತ್ಮರಕ್ಷಣೆಗಾಗಿ ಇದನ್ನೆಲ್ಲಾ ಕಲಿಯುತ್ತಿದ್ದೇವೆ ಅಂತಾರೆ ಮಾರಿಟ್ಸಾ. ಜಿಂಬಾಬ್ವೆ ಕಾನೂನಿನ ಪ್ರಕಾರ, ಹುಡುಗರು ಅಥವಾ ಹುಡುಗಿಯರು ಕಾನೂನು ಬದ್ಧವಾಗಿ ಮದುವೆಯಾಗಬೇಕು ಅಂದರೆ 18 ವರ್ಷ ವಯಸ್ಸಾಗಿರಬೇಕು. ಆದರೆ ಆರ್ಥಿಕ ಸಮಸ್ಯೆ ಕಾರಣಗಳಿಂದಾಗಿ ಇಲ್ಲಿ ಬಾಲ್ಯ ವಿವಾಹವನ್ನ ಮಾಡಲಾಗುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...