ಕಡಿಮೆ ಬೆಲೆಗೆ ಸಿಕ್ಕಿತು ಅಂತಾ ಹೊಸ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಆರಂಭಿಸಿದ 19 ವರ್ಷದ ಯುವತಿಗೆ ಸುಮಾರು ದಿನಗಳ ಬಳಿಕ ತಾನು ನಿವೃತ್ತಿ ಹೊಂದಿದ ವೃದ್ಧರ ಜೊತೆ ಇದ್ದೇನೆ ಎಂಬ ವಿಚಾರ ತಿಳಿದು ಆಶ್ಚರ್ಯಚಕಿತಳಾಗಿದ್ದಾಳೆ.
ಹೊಸ ಮನೆಗಾಗಿ ಹುಡುಕಾಟ ನಡೆಸುತ್ತಿದ್ದ ಯುವತಿ ಅತ್ಯಂತ ಕಡಿಮೆ ವೆಚ್ಚದ ಬಾಡಿಗೆಗೆ ಒಳ್ಳೆಯ ಮನೆ ಇರೋದನ್ನ ಕಂಡು ಆಶ್ಚರ್ಯಚಕಿತಳಾಗಿದ್ದಳು.
ಈ ಮನೆಯ ಬಾಡಿಗೆ ಬೇರೆ ಮನೆಗಳಿಗೆ ಹೋಲಿಸಿದ್ರೆ ತುಂಬಾನೇ ಕಡಿಮೆ ಇತ್ತು. ಎರಡು ಬೆಡ್ರೂಮ್ಗಳ ಮನೆಗೆ ಕೇವಲ 350 ಡಾಲರ್ ಬಾಡಿಗೆ ನೀಡಬೇಕಿತ್ತು. ನಾನಂತೂ ತುಂಬಾನೇ ಖುಷಿಯಾಗಿದ್ದೆ ಎಂದು ಆಕೆ ಹೇಳಿದ್ದಾಳೆ.
ನಾನು ಮನೆಯ ಹೊರಗಿದ್ದ ಕಾರಿನ ಬಳಿ ತೆರಳುತ್ತಿದ್ದ ವೇಳೆ ನನ್ನ ನೆರೆಹೊರೆಯವರನ್ನ ಭೇಟಿ ಮಾಡಿದೆ. ಆದರೆ ನಾನು ಭೇಟಿ ಮಾಡಿ ಪ್ರತಿಯೊಬ್ಬರು 65 ವರ್ಷ ಮೇಲ್ಪಟ್ಟವರೇ ಆಗಿದ್ದರು ಎಂದು ಆಕೆ ಹೇಳಿದ್ದಾಳೆ.
ಈ ಹೊಸ ಮನೆಗೆ ಬಂದು ಒಂದು ವಾರದ ಬಳಿಕ ಯುವತಿಗೆ ತಾನಿರುವ ಮನೆಯ ಸುತ್ತ ಇರುವವರೆಲ್ಲರೂ 65 ವರ್ಷ ಮೇಲ್ಪಟ್ಟವರು ಎಂಬ ವಿಚಾರ ತಿಳಿದಿದೆ. ಒಂದು ವಾರದ ಬಳಿಕ ಅಪಾರ್ಟ್ಮೆಂಟ್ ಹೊರಗೆ ಹಿರಿಯ ನಾಗರಿಕರ ಅಪಾರ್ಟ್ಮೆಂಟ್ ಎಂಬ ಬೋರ್ಡ್ ಇರೋದನ್ನ ನಾನು ನೋಡಿದೆ. ಆಗ ನನಗೆ ನಾನು ಅಕಸ್ಮಾತ್ ಆಗಿ ನಿವೃತ್ತಿ ಹೊಂದಿದವರಿಗೆ ಮಾಡಲಾದ ಅಪಾರ್ಟ್ಮೆಂಟ್ನಲ್ಲಿ ನಾನಿದ್ದೇನೆ ಎಂಬ ವಿಚಾರ ತಿಳೀತು ಎಂದು ಆಕೆ ಹೇಳಿದ್ದಾಳೆ.
ಈ ಕಮ್ಯೂನಿಟಿಗೆ ಸೇರಿದ 10 ಅಪಾಟ್ಮೆಂಟ್ಗಳಲ್ಲಿ ವಾಸಿಸುತ್ತಿದ್ದ ಯುವತಿ ಈಕೆ ಮಾತ್ರ ಆಗಿದ್ದಳು. ಇದೀಗ ತನ್ನ ನೆರೆಹೊರೆಯವರ ಜೊತೆ ತುಂಬಾನೇ ಖುಷಿಯಾಗಿರುವ ಈ ಯುವತಿ ಅವರ ಕತೆಗಳನ್ನ ಕೇಳುತ್ತಾ, ಸ್ವಾದಯುಕ್ತ ಆಹಾರವನ್ನ ಸೇವಿಸುತ್ತಾ ಹಾಯಾಗಿದ್ದಾಳೆ.