150 ಮಂದಿ ಒಡಹುಟ್ಟಿದವರು ಹಾಗೂ 26 ಅಮ್ಮಂದಿರ ನಡುವೆ ಬೆಳೆದುಬರುವ ಅನುಭವ ಹೇಗಿರುತ್ತದೆ ಎಂದು ಕೆನಡಾದ ಟೀನೇಜರ್ ಹಾಗೂ ಆತನ ಸಹೋದರರು ಹಂಚಿಕೊಂಡಿದ್ದಾರೆ.
ಬಹುಸಂಗಾತಿಯರ ಸಂಸ್ಕೃತಿಯಿಂದ ಬೆಳೆದುಬಂದ ಮರ್ಲಿನ್ ಬ್ಲಾಕ್‌ಮೋರ್ ಎಂಬ ಈ 19 ವರ್ಷದ ಟೀನೇಜರ್, ಕೆನಡಾದ ಅತ್ಯಂತ ಜನಪ್ರಿಯ ಬಹುಮಡದಿಯರ ಪತಿ ವಿನ್‌ಸ್ಟನ್ ಬ್ಲಾಕ್‌ಮೋರ್ ಪುತ್ರ.
ಬ್ರಿಟೀಷ್ ಕೊಲಂಬಿಯಾದ ಬೌಂಟಿಫುಲ್ ಎಂಬ ಪ್ರದೇಶದಲ್ಲಿ ಮರ್ಲಿನ್ ತನ್ನ ದೈತ್ಯ ಕುಟುಂಬದೊಂದಿಗೆ ವಾಸವಿದ್ದಾನೆ. ತಾನು ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಲು ಈತ ಟಿಕ್‌ಟಾಕ್ ಖಾತೆಯೊಂದನ್ನು ತೆರೆದಿದ್ದು, ಆ ಮೂಲಕ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿದ್ದಾನೆ.
ತನ್ನ ಕುಟುಂಬ ಇರುವ ಗಾತ್ರಕ್ಕೆ ಮಕ್ಕಳು ತಮ್ಮದೇ ಶಾಲೆಗೆ ಹೋಗಬೇಕಾಗುತ್ತದೆ ಎಂದ ಮರ್ಲಿನ್, ಇವರೆಲ್ಲಾ ತಂತಮ್ಮ ಅಮ್ಮಂದಿರೊಂದಿಗೆ ಪ್ರತ್ಯೇಕವಾಗಿ ಇರುವ ಬದಲು ದೊಡ್ಡದೊಂದು ಮೋಟೆಲ್ ಹೌಸ್‌ನಲ್ಲಿ ಇದ್ದಾರೆ ಎಂದು ಹೇಳಿದ್ದಾನೆ. ಪ್ರತಿ ಮನೆಯಲ್ಲೂ ಇಬ್ಬರು ತಾಯಂದಿರು ಹಾಗೂ ಅವರ ಮಕ್ಕಳು ಇದ್ದಾರೆ. ಮತ್ತೊಂದು ಕುಟುಂಬದಿಂದ ಮೂರು ಭಿನ್ನ ಸಹೋದರಿಯರ ಮೂರು ಗುಂಪು ಹಾಗೂ ನಾಲ್ವರು ಭಿನ್ನ ಸಹೋದರಿಯರ ನಾಲ್ಕು ಗುಂಪು ಇರುವುದಾಗಿ ಮರ್ಲಿನ್ ಹೇಳಿಕೊಂಡಿದ್ದಾನೆ.
ಪ್ರತಿಯೊಂದು ಮಗುವೂ ತನ್ನ ದೈಹಿಕ ತಾಯಿಯನ್ನು ’ಮಮ್’ ಎಂದೂ ಮಿಕ್ಕ ಅಮ್ಮಂದಿರನ್ನು ಅವರ ಹೆಸರನ್ನು ಸೇರಿಸಿಕೊಂಡು ’ಮದರ್’ ಎಂದೂ ಸಂಬೋಧಿಸುತ್ತಿದ್ದಾರೆ.
ವಿನ್‌ಸ್ಟನ್‌ನ 27 ಮಡದಿಯರಲ್ಲಿ 22 ಮಂದಿಗೆ ಮಕ್ಕಳಾಗಿದ್ದು, 16 ಮಡದಿಯರು ಆತನೊಂದಿಗೆ ವೈವಾಹಿಕ ಸಂಬಂಧವನ್ನು ಇನ್ನೂ ಉಳಿಸಿಕೊಂಡಿದ್ದಾರೆ.
ತನ್ನ ಪ್ರತಿಯೊಂದು ಸದಸ್ಯನ ಹುಟ್ಟುಹಬ್ಬವನ್ನು ಕುಟುಂಬ ಭರ್ಜರಿಯಾಗಿ ಆಚರಿಸುತ್ತದೆ. ಥ್ಯಾಂಕ್ಸ್‌ಗಿವಿಂಗ್ ಹಾಗೂ ರೀಯೂನಿಯನ್ ಸಮಾರಂಭಗಳು ಯವಾಗಲೂ ದೊಡ್ಡ ಪಾರ್ಟಿಗಳಾಗಿ ಆಚರಿಸಲ್ಪಡುತ್ತವೆ.