ಮಗುವೊಂದಕ್ಕೆ ಜನ್ಮವಿತ್ತಿರುವ 17 ವರ್ಷದ ಹುಡುಗಿಯೊಬ್ಬಳು ತನಗೆ ಗರ್ಭಧಾರಣೆಯಾದ ಬಗ್ಗೆ ಸುಳಿವೇ ಇರಲಿಲ್ಲ ಎಂದಿದ್ದಾಳೆ. ಬ್ರಿಟನ್‌ನ ಐಮಿ ಸ್ಟೀವನ್ಸ್ ಹೆಸರಿನ ಈ ಅಪ್ರಾಪ್ತೆ ಮಧ್ಯ ರಾತ್ರಿ ವೇಳೆ ಟಾಯ್ಲೆಟ್‌ನಲ್ಲಿ ಕುಳಿತಿದ್ದ ವೇಳೆ ಹೆರಿಗೆಯಾಗಿದೆ.
ತಿಂಗಳಿಗೊಮ್ಮೆ ತೆಗೆದುಕೊಳ್ಳುವ ಗರ್ಭಧಾರಣೆಯ ಮೂರು ಇಂಜೆಕ್ಷನ್ ತೆಗೆದುಕೊಂಡ ಕಾರಣ ಆಕೆಗೆ ಹೀಗೆ ಆಗಿದೆ ಎಂದು ಮೆಟ್ರೋ ಯುಕೆ ವರದಿ ಮಾಡಿದೆ.
ಆದರೆ ಇದನ್ನೂ ಮೀರಿದ ಅಚ್ಚರಿಯೆಂದರೆ, ಐಮಿಗೆ ಕೇವಲ 5-6 ವಾರಗಳ ಗರ್ಭಿಣಿಯಾಗಿದ್ದ ವೇಳೆಯೇ ಹೆರಿಗೆ ಆಗಿರುವುದು. ತನಗೆ ಗರ್ಭಧಾರಣೆಯಾಗಿದೆ ಎಂದು ತಿಳಿದ ಮೂರೇ ದಿನಗಳಲ್ಲಿ ಐಮಿಗೆ ಹೆರಿಗೆಯಾಗಿದೆ.
ಟಾಯ್ಲೆಟ್ ಕಮೋಡ್‌ನಿಂದ ತನ್ನ ಮಗುವನ್ನು ಎತ್ತಿಕೊಂಡ ಐಮಿಗೆ ಆಕೆಯ ತಾಯಿ ಕೂಡಲೇ ಸ್ಪಂದಿಸಿ, ಆಕೆಯ ಕರುಳ ಬಳ್ಳಿಯನ್ನು ನಾಜೂಕಾದ ಬಟ್ಟೆಯೊಂದರಿಂದ ಕಟ್ಟಿದ್ದಾರೆ. ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿ ಮಗಳನ್ನು ಆಸ್ಪತ್ರೆಗೆ ಸೇರಿಸಿ ಆಕೆಯ ಆರೋಗ್ಯ ಪರಿಸ್ಥಿತಿ ಹದಗೆಡದಂತೆ ನೋಡಿಕೊಂಡಿದ್ದಾರೆ.