ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಜಗತ್ತಿನ ಬಹುತೇಕ ಮಂದಿ ತಂತಮ್ಮ ಮನೆಗಳ ಹಾಗೂ ಕಚೇರಿಯ ಕೆಲಸಗಳನ್ನು ಮಾಡುತ್ತಾ ಕಾಲ ಕಳೆದರೆ, ಬ್ರಿಟನ್ನ ಟೀನೇಜರ್ ಒಬ್ಬರು ಈ ಬಿಡುವಿನ ಅವಧಿಯಲ್ಲಿ ತನ್ನ ಪ್ರತಿಭೆಯನ್ನು ಯಶಸ್ವಿ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ.
ಅಮಿ ಸಿಂಡನ್ ಡೇವಿಡ್ಸನ್ ಎಂಬ 18ರ ಹರೆಯದ ಈ ಹುಡುಗಿ, ತನ್ನ ವಿಶಿಷ್ಟ ಕಲೆಯಿಂದ ಒಳ್ಳೆಯ ಬ್ಯುಸಿನೆಸ್ ನಡೆಸುತ್ತಿದ್ದಾಳೆ. ಗರ್ಭದಲ್ಲಿರುವ ಮಕ್ಕಳ ಅಲ್ಟ್ರಾಸೌಂಡ್ ಸ್ಕ್ಯಾನ್ಗಳನ್ನು ಕ್ಯಾಂಡಲ್ಗಳ ಮೇಲೆ ಪೇಂಟ್ ಮಾಡುವ ಈ ಟೀನೇಜರ್, ಪೆಂಟಿಂಗ್ ಕಲೆಗೆ ಹೊಸ ಥೀಮ್ ಅನ್ನೇ ಸೇರಿಸಿದ್ದಾರೆ.
ಆಕೆಯ ಈ ಪೇಂಟಿಂಗ್ ಬರ್ಮಿಂಗ್ಹ್ಯಾಮ್ ಹಾಗೂ ಬ್ರಿಟನ್ನ ಅನೇಕ ಕಡೆಗಳಲ್ಲಿ ಭಾರೀ ಫೇಮಸ್ ಆಗಿದೆ.
ತಮ್ಮ ಮೊದಲ ಬೇಬಿ ಸ್ಕ್ಯಾನ್ ಕಲಾಕೃತಿಯನ್ನು ತಮ್ಮನಿಗೆ ಕೊಟ್ಟು, ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅಮಿಗೆ ನೆಟ್ಟಿಗರಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿದೆ. ಇದರಿಂದ ಉತ್ತೇಜಿತಳಾದ ಆಕೆ, ಲಾಕ್ಡೌನ್ ಅವಧಿಯ ಬಿಡುವಿನ ವೇಳೆಯಲ್ಲಿ ಹೊಸ ಬ್ಯುಸಿನೆಸ್ ಆರಂಭಿಸಿದ್ದಾಳೆ.