alex Certify ಮೈತುಂಬಾ ಟ್ಯಾಟೂ ಜೊತೆಗೆ ಕಣ್ಣನ್ನು ವಿರೂಪ ಮಾಡಿಕೊಂಡ ಶಿಕ್ಷಕನಿಗೆ ಗೇಟ್‌ ಪಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈತುಂಬಾ ಟ್ಯಾಟೂ ಜೊತೆಗೆ ಕಣ್ಣನ್ನು ವಿರೂಪ ಮಾಡಿಕೊಂಡ ಶಿಕ್ಷಕನಿಗೆ ಗೇಟ್‌ ಪಾಸ್

ತನ್ನ ಕಣ್ಣುಗಳನ್ನು ಸಂಪೂರ್ಣ ಕಪ್ಪಗೆ ಮಾಡಿಕೊಂಡು, ಮೈ ತುಂಬಾ ಟ್ಯಾಟೂ ಬಳಿದುಕೊಂಡಿದ್ದ ಶಿಕ್ಷಕನೊಬ್ಬನನ್ನು ಅವರ ಶಾಲಾ ಆಡಳಿತ, ಸೇವೆಯಿಂದ ವಜಾಗೊಳಿಸಿದೆ.

ಕಿಂಡರ್‌ಗಾರ್ಟನ್‌ ಮಕ್ಕಳಿಗೆ ಫ್ರೆಂಚ್‌ ಪಾಠ ಹೇಳುತ್ತಿದ್ದ ಸಿಲ್ವೈನ್ ಹೆಲೈನ್‌, ತನ್ನ ಕಣ್ಣಿನಲ್ಲಿದ್ದ ಬಿಳಿ ಭಾಗವನ್ನು ಸರ್ಜರಿ ಮಾಡಿ ತೆಗೆಸಿದ್ದು, ಮೈತುಂಬಾ ಟ್ಯಾಟೂ ಮಾಡಿಸಿಕೊಂಡಿದ್ದಾನೆ. 35 ವರ್ಷದ ಈತ ತನ್ನ ವೃತ್ತಿಯಲ್ಲಿ ಮುಂದುವರೆಯಲು ಉತ್ಸುಕನಾಗಿರುವುದಾಗಿ ಹೇಳಿಕೊಂಡಿದ್ದಾನೆ.

“ನನ್ನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ನನ್ನೊಂದಿಗೆ ಏನೂ ಸಮಸ್ಯೆ ಹೊಂದಿಲ್ಲ, ಏಕೆಂದರೆ ಅವರಿಗೆ ನನ್ನ ಬಗ್ಗೆ ತಿಳಿದಿದೆ. ಆದರೆ ಬಹಳ ದೂರದಿಂದ ನೋಡುವವರಿಗೆ ನಾನು ಕೆಟ್ಟದಾಗಿ ಕಾಣಬಹುದು” ಎನ್ನುವ ಸಿಲೈನ್‌, ಪಲಾಯ್ಸೀಯ ಡಾಕ್ಟೀಯರ್‌ ಮೊರೆರೆ ಎಲೆಮೆಂಟರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. 460 ಗಂಟೆಗಳಿಗೂ ಹೆಚ್ಚು ಅವಧಿ ಸೂಜಿಯಿಂದ ಚುಚ್ಚಿಸಿಕೊಂಡ ಸಿಲೈನ್, ಈಗ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾನೆ. ’ಫ್ರೀಕಿ ಹುಡಿ’ ಎಂದು ಖ್ಯಾತನಾಗಿರುವ ಈತನ ಇನ್‌ಸ್ಟಾಗ್ರಾಂ ಖಾತೆಗೆ 64,300 ಅನುಯಾಯಿಗಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...