ನೀವು ವಿಶ್ವದ ಅಧ್ಯಕ್ಷರಾದರೆ ಏನು ಮಾಡಲು ಬಯಸುತ್ತೀರಿ? ಎಂಬ ಶಿಕ್ಷಕರೊಬ್ಬರ ಪ್ರಶ್ನೆಗೆ ಪುಟ್ಟ ಪುಟ್ಟ ಮಕ್ಕಳು ರೋಚಕ ಉತ್ತರ ನೀಡಿ ಗಮನ ಸೆಳೆದಿದ್ದಾರೆ. ವಿಷಯವೀಗ ಅಂತರ್ಜಾಲದಲ್ಲಿ ಚರ್ಚೆಯಲ್ಲಿದೆ.
ಜಾರ್ಜ್ ಪಾಯಿಂಟರ್ ಎಂಬ ಶಿಕ್ಷಕರು ಒಂದನೇ ತರಗತಿ ಮಕ್ಕಳ ಮುಂದೆ ಈ ಪ್ರಶ್ನೆ ಇಟ್ಟಿದ್ದರು. ಬಳಿಕ ಮಕ್ಕಳು ನೀಡಿದ ಉತ್ತರವನ್ನು ಮತ್ತು ಆ ಉತ್ತರಕ್ಕೆ ತಮ್ಮ ವಿಶ್ಲೇಷಣೆಯನ್ನು ಸಹ ಅವರು ಎಳೆಎಳೆಯಾಗಿ ಜಾಲತಾಣದಲ್ಲಿ ಬಿಡಿಸಿಟ್ಟಿದ್ದಾರೆ.
ಆಕ್ಸಿಜನ್ ಕೊರತೆ ಹೆಚ್ಚುತ್ತಿದ್ದರೂ ಸರ್ಕಾರ ‘ಆಲ್ ಇಸ್ ವೆಲ್’ ಎಂಬ ಭ್ರಮೆ ಮೂಡಿಸುತ್ತಿದೆ
ವಿಶ್ವದ ಅಧ್ಯಕ್ಷ ಸ್ಥಾನ ಎಂಬುದಿಲ್ಲ, ಆದರೆ ಮಕ್ಕಳ ಮುಂದೆ ಪ್ರಶ್ನೆ ಇಟ್ಟಾಗ ಯಾವ ರೀತಿಯ ಕುತೂಹಲದ ಉತ್ತರ ಬರಬಹುದು ಎಂದು ತಿಳಿದುಕೊಳ್ಳುವ ಪ್ರಯತ್ನ ಶಿಕ್ಷಕರಾಗಿತ್ತು.
ಆಲಿಸ್ ಎಂಬ ಬಾಲಕಿ ಬೆಳಗಿನ ಉಪಾಹಾರಕ್ಕೆ ಸಿಹಿತಿಂಡಿಗಳು ತಿನ್ನುವೆ ಎಂದು ಹೇಳಿದ್ದಳು. ಈ ಉತ್ತರ ನೆಟ್ಟಿಗರಿಗೆ ಬಹಳ ಮಜಾ ಕೊಟ್ಟಿದೆ. ಇಬ್ಬರು ಮಕ್ಕಳು ಕೋವಿಡ್ ತೊಡೆದುಹಾಕುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.