ಷಿಕಾಗೋದ ಮಹಿಳೆಯೊಬ್ಬರು ನಿಧನರಾಗುವ ಮುನ್ನ ತಾವೇ ಶೋಕ ಪತ್ರವೊಂದನ್ನು ಬರೆದುಕೊಂಡಿದ್ದು, ಅದೀಗ ವೈರಲ್ ಆಗಿದೆ.
ಅಕ್ಟೋಬರ್ 4ರಂದು ನಿಧನರಾದ ಸ್ಟೇಸಿ ಲೋಯಿಸ್ ಹೆಸರಿನ ಈ ಮಹಿಳೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ತಮ್ಮ ಈ ಅನಾರೋಗ್ಯದಿಂದ ಮಾತನಾಡುವ ಅಥವಾ ಬರೆಯುವ ಕ್ಷಮತೆಯನ್ನು ಕಳೆದುಕೊಳ್ಳುವ ಮುನ್ನವೇ ತಮ್ಮ ಜೀವನ ಹಾಗೂ ಸಾಧನೆಗಳ ಬಗ್ಗೆ ಬರೆಯಲು ಕುಳಿತಿದ್ದರು ಸ್ಟೇಸಿ. ತಮ್ಮ ಈ ಸ್ವಯಂ ಸಂತಾಪ ಪತ್ರಕ್ಕೆ, “Take it from me, I’m dead” ಎಂದು ಸಹಿ ಹಾಕಿದ್ದಾರೆ ಸ್ಟೇಸಿ.
ಷಿಕಾಗೋ ಟ್ರಿಬ್ಯೂನ್‌ನಲ್ಲಿ ಪ್ರಕಟವಾದ ಈ ಪತ್ರದಲ್ಲಿ; ಕ್ಲಬ್‌ಗಳಲ್ಲಿ ಹಾಡುವುದರಿಂದ ಹಿಡಿದು, ನಾರ್ತ್ ವೆಸ್ಟರ್ನ್ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು, ಆಭರಣ ಕೆತ್ತನೆ, ಬೆಲ್ಲಿ ಡ್ಯಾನ್ಸಿಂಗ್, ಗಾರ್ಡನಿಂಗ್ ಸೇರಿದಂತೆ ತಮ್ಮ ಜೀವಿತಾವಧಿಯಲ್ಲಿ ಅನೇಕ ಕೆಲಸಗಳನ್ನು ಮಾಡಿದ ವಿಚಾರವನ್ನು ಹಂಚಿಕೊಂಡಿದ್ದಾರೆ ಸ್ಟೇಸಿ.
ಆಗಸ್ಟ್ 30, 1968ರಲ್ಲಿ ಜನಿಸಿದ ಸ್ಟೇಸಿಗೆ, “ನಿನ್ನ ಕೆಲಸವನ್ನು ನೀನು ಮಾಡಿಕೊಳ್ಳದೇ ಇದ್ದಲ್ಲಿ, ಯಾರೂ ನಿನಗೆ ಮಾಡಿಕೊಡಲಾರರು” ಎಂದು ಅವರ ತಾಯಿ ಹೇಳಿದ್ದನ್ನು ಲೇಖಕಿ ಬರೆದುಕೊಂಡಿದ್ದಾರೆ.