ಕೋವಿಡ್-19 ಕ್ವಾರಂಟೈನ್ ಉಲ್ಲಂಘನೆ ಮಾಡಿದ್ದಾರೆ ಎಂದು ದಂಡ ವಿಧಿಸಲಾದ ತೈವಾನ್‌ನ ವ್ಯಕ್ತಿಯೊಬ್ಬರು ಅಪಹರಣವಾಗಿದ್ದರು ಎಂದು ನಂತರ ತಿಳಿದು ಬಂದಿದೆ.
ಚೆನ್ ಎಂಬ ತಮ್ಮ ಸರ್‌ನೇಮ್‌ನಿಂದ ಗುರುತಿಸಲ್ಪಟ್ಟ ಈ ವ್ಯಕ್ತಿ ಅಕ್ಟೋಬರ್ 2020ರಲ್ಲಿ ಹಾಂಕಾಂಗ್‌ನಿಂದ ಮನೆ ತೈವಾನ್‌ಗೆ ಮರಳಿದ ಬಳಿಕ ತಮ್ಮ ಸ್ನೇಹಿತನ ಮನೆಯಲ್ಲಿ 14 ದಿನಗಳ ಕ್ವಾರಂಟೈನ್ ಪೂರೈಸಲು ನಿರ್ಧರಿಸಿದ್ದರು. ಆದರೆ ಮಾರನೇ ದಿನವೇ ತಮ್ಮ ಸ್ನೇಹಿತನ ಮನೆಗೆ ನುಗ್ಗಿದ ಸಾಲಗಾರರು ಚೆನ್‌ರನ್ನು ತಪ್ಪಾಗಿ ಗುರುತಿಸಿ ಆತನನ್ನು ಅಪಹರಿಸಿಬಿಟ್ಟಿದ್ದರು.
ಚೆನ್‌ನನ್ನು ಬಲವಂತವಾಗಿ ಖುದ್ದು ಆತನ ಮನೆಗೇ ಕೊಂಡೊಯ್ದ ಅಪಹರಣಕಾರರು, ದುಡ್ಡು ಸುಲಿಗೆ ಮಾಡಿ ಮತ್ತೆ ಆತನನ್ನು ಆತನ ಸ್ನೇಹಿತನ ಮನೆಯತ್ತ ತಂದು ಬಿಟ್ಟಿದ್ದರು.
ಪ್ಲೇ ಸ್ಟೇಷನ್ ಖರೀದಿಗಾಗಿ ಕೊರೊನಾ ಮರೆತು ಮುಗಿಬಿದ್ದ ಗೇಮರ್‌ಗಳು
ಕ್ವಾರಂಟೈನ್ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಚೆನ್‌ಗೆ ಒಂದು ತೈವಾನೀಸ್ ಡಾಲರ್ ದಂಡ ವಿಧಿಸಲಾಗಿತ್ತು. ಕೋರ್ಟ್‌ನಲ್ಲಿ ಹೋರಾಟ ಮಾಡಿದ ಚೆನ್, ತನ್ನನ್ನು ಅಪಹರಿಸಲಾಗಿತ್ತು ಎಂದು ವಿವರಣೆ ಕೊಟ್ಟ ಬಳಿಕ ಆತನಿಗೆ ವಿಧಿಸಿದ್ದ ದಂಡವನ್ನು ವಜಾಗೊಳಿಸಲಾಗಿತ್ತು.
ಚೆನ್ ಕ್ವಾರಂಟೈನ್ ಉಲ್ಲಂಘನೆ ಮಾಡಿದ ವಿಚಾರ ಪೊಲೀಸರಿಗೆ ಹೇಗೆ ತಿಳಿದು ಬಂತು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.